ಪೊಲೀಸರ ಮೇಲೆಯೇ ಹಲ್ಲೆಗೆ ಯತ್ನ, ರೌಡಿಶೀಟರ್​​ ಮೇಲೆ ಫೈರಿಂಗ್..!

ಬೆಂಗಳೂರು: ಅಶೋಕನಗರದ ರೌಡಿಶೀಟರ್ ವಿನೋದ್ ಅಲಿಯಾಸ್ ಪಚ್ಚೆ ಎಂಬಾತನ ಮೇಲೆ ಪೊಲೀಸರು ಫೈರಿಂಗ್ ನಡೆಸಿದ್ದಾರೆ. ಬನ್ನೆರುಘಟ್ಟ ಮುಖ್ಯರಸ್ತೆಯ ಬಳಿ ಮಧ್ಯರಾತ್ರಿ 3 ಗಂಟೆ ಸುಮಾರಿಗೆ ಅಶೋಕ್‌ನಗರ ಠಾಣೆ ‌ಇನ್ಸ್​ಪೆಕ್ಟರ್ ಶಶಿಧರ್, ರೌಡಿಶೀಟರ್​ ಕಾಲಿಗೆ ಶೂಟ್ ಮಾಡಿ ಅರೆಸ್ಟ್​ ಮಾಡಿದ್ದಾರೆ.

ಅಶೋಕನಗರ ಠಾಣೆ ಹಾಗೂ ನಗರದ ವಿವಿಧ ಪೊಲೀಸ್​ ಸ್ಟೇಷನ್​​ಗಳಲ್ಲಿ ಈತನ ಮೇಲೆ 10ಕ್ಕೂ ಹೆಚ್ಚು ಕೇಸ್​ಗಳಿವೆ. ರಾಬರಿ, ಕೊಲೆ ಯತ್ನದ ಆರೋಪದಲ್ಲಿ ವಿನೋದ್​ ಪೊಲೀಸರಿಗೆ ಪ್ರಮುಖವಾಗಿ ಬೇಕಾಗಿದ್ದ. ಅದ್ರಂತೆ ನಿನ್ನೆ ರಾತ್ರಿ ಆರೋಪಿ ಬಗ್ಗೆ ಖಚಿತ ಮಾಹಿತಿ ಪಡೆದ ಅಶೋಕನಗರ ಪೊಲೀಸರು, ಬನ್ನೆರುಘಟ್ಟ ರಸ್ತೆಯಲ್ಲಿರುವ ಇಂಡಿಯನ್ ಕ್ರಿಶ್ಚಿಯನ್ ಸ್ಮಶಾನಕ್ಕೆ ಎಂಟ್ರಿ ನೀಡಿ ಕಾರ್ಯಾಚರಣೆ ಶುರು ಮಾಡಿದ್ದರು.

ಆಗ ರೌಡಿಶೀಟರ್ ವಿನೋದ್​​ ನೋಡಿದ ಪೊಲೀಸರು ಕೂಡಲೇ ಶರಣಾಗುವಂತೆ ಸೂಚನೆ ನೀಡಿದ್ದಾರೆ. ಇದಕ್ಕೆ ಒಪ್ಪದ ರೌಡಿಶೀಟ್, ಪೊಲೀಸರ ಮೇಲೆಯೇ ಮಚ್ಚಿನಿಂದ ಹಲ್ಲೆಗೆ ಮುಂದಾಗಿದ್ದ. ಹೀಗಾಗಿ ಆತ್ಮರಕ್ಷಣೆಗಾಗಿ ಇನ್ಸ್​ಪೆಕ್ಟರ್ ಶಶಿಧರ್, ಆರೋಪಿ ಕಾಲಿಗೆ ಗುಂಡು ಹಾರಿಸಿದ್ದಾರೆ. ಇನ್ಸ್​ಪೆಕ್ಟರ್ ಗುಂಡೇಟಿಗೆ ಆರೋಪಿಯ ಬಲಗಾಲಿಗೆ ಏಟಾಗಿದ್ದು, ಬೌರಿಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.


Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv