ಕೋಣನಕುಂಟೆ ರೌಡಿ ಶೀಟರ್ ಜಯಂತ್ ಹತ್ಯೆ ಕೇಸ್: ಆರೋಪಿ ಅರೆಸ್ಟ್

ಬೆಂಗಳೂರು: ಕೋಣನಕುಂಟೆ ರೌಡಿ ಶೀಟರ್ ಜಯಂತ್ ಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸುಬ್ರಹ್ಮಣ್ಯಪುರ ಪೊಲೀಸರು ಆರೋಪಿಯನ್ನ ಅರೆಸ್ಟ್ ಮಾಡಿದ್ದಾರೆ. ಪವನ್ ಬಂಧಿತ ಆರೋಪಿ. ಕೃತ್ಯ ನಡೆದ 12 ಗಂಟೆಯೊಳಗೆ ಆರೋಪಿಯನ್ನ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಹತ್ಯೆಯ ಪ್ರಮುಖ ಆರೋಪಿ ರಾಮು ಸೇರಿ ಇನ್ನೂ ಮೂವರು ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದು, 2015ರಲ್ಲಿ ಜಯಂತ್, ರಾಮು ಹತ್ಯೆಗೆ ಯತ್ನಿಸಿದ್ದ. 2016ರಲ್ಲಿ ಕೇಬಲ್ ಗಣೇಶ್‌ನನ್ನ ಜಯಂತ್ ಹತ್ಯೆ ಮಾಡಿದ್ದ. ಈ ಎರಡೂ ಕಾರಣದಿಂದ ಕೋಣನಕುಂಟೆ ರೌಡಿಶೀಟರ್ ಜಯಂತ್‌ನನ್ನ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ ಸುಬ್ರಹ್ಮಣ್ಯಪುರ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv