ಲೋಕಸಭೆ ಚುನಾವಣೆಯೇ ಒಂದು ಹಬ್ಬ, ಹಾಗಿದ್ಮೇಲೆ ಯಾಕೆ ತಡ…ಕುಣೀರಿ ಮತ್ತ..!

ಕೋಲ್ಕತ್ತಾ: ರಾಜಕಾರಿಣಿಗಳ ಪಾಲಿಗೆ ಚುನಾವಣೆಯೇ ಒಂದು ದೊಡ್ಡ ಹಬ್ಬ. ಹೀಗಾಗಿ ಚುನಾವಣೆ ಅಂದರೇ ಜನಪ್ರತಿನಿಧಿಗಳಿಗೆ ದಣಿವಾಗುವುದೇ ಇಲ್ಲ. ಮತಪ್ರಚಾರವನ್ನು ಸಂಭ್ರಮದಂತೆ ನಡೆಸುತ್ತಾರೆ. ಇದಕ್ಕೆ ಸಾಕ್ಷಿ ಎಂಬಂತೆ ಪಶ್ಚಿಮ ಬಂಗಾಳದ ಮಾಲ್ಡಾದಲ್ಲಿ ಕಾರ್ಯಕರ್ತರ ಜೊತೆ ರೂಪಾ ಗಂಗೂಲಿ ಭರ್ಜರಿಯಾಗಿ ಸ್ಟೆಪ್​ ಹಾಕಿದ್ದಾರೆ. ನಾಸಿಕ್​ ಡೊಳ್ಳಿನ ಸದ್ದಿಗೆ, ಮನಸೋತ ಬಿಜೆಪಿ ನಾಯಕಿ ರೂಪಾ ಗಂಗೂಲಿ ಸೀರೆಯ ಸೆರಗನ್ನು ಸೊಂಟಕ್ಕೆ ಸಿಕ್ಕಿಸಿಕೊಂಡು ಹಳೇ ಸಿನಿಮಾದ ಸ್ಟೈಲ್​ನಲ್ಲಿ ಸ್ಟೆಪ್ ಹಾಕಿದ್ದಾರೆ. ಈ ಸಲದ ಲೋಕಸಭೆಯ ಚುನಾವಣೆಯಲ್ಲಿ ಇಂತಹ ಹಲವು ವಿಶೇಷಗಳು ಕಾಣಲು ಸಿಗುತ್ತಿವೆ.

Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv