ವಿದೇಶದಲ್ಲಿ ಹೊಸ ಅವತಾರದಲ್ಲಿ ಸಿಕ್ಕಿಬಿದ್ದ ರೋಹಿತ್ ಶರ್ಮಾ..!

ಫ್ಯಾಷನ್​, ಸ್ಟೈಲ್​ ಹಾಗೂ ಟ್ರೆಂಡ್​ ವಿಷಯ ಬಂದಾಗ ಕ್ರಿಕೆಟರ್​​ಗಳೇನೂ ಕಮ್ಮಿಯಿಲ್ಲ. ಸದಾ ಒಂದಿಲ್ಲೊಂದು ಕ್ರೇಜ್​​ನಲ್ಲಿರೋ ಕ್ರಿಕೆಟರ್ಸ್​​ಗಳಲ್ಲಿ ಇದೀಗ ಅರ್ಧ ಗಡ್ಡದ ಕ್ರೇಜ್ ಶುರುವಾಗಿದೆ. ಹೀಗಿರುವಾಗ ಭಾರತದ ಸ್ಟಾರ್ ಬ್ಯಾಟ್ಸ್​​ಮನ್ ರೋಹಿತ್ ಶರ್ಮಾ ಮಾತ್ರ ಕೊಂಚ ಡಿಫರೆಂಟ್​​​​​​​​​ ಲುಕ್​​​​ನಲ್ಲಿ ಕಂಗೊಳಿಸುತ್ತಿದ್ದಾರೆ.

ಜಾಲಿಮೂಡ್​​ನಲ್ಲಿ ರೋಹಿತ್
ಸುಮಾರು ಒಂದುವರೆ ತಿಂಗಳು ಕಾಲ ಐಪಿಎಲ್​​​​ನಲ್ಲಿ ಬ್ಯುಸಿಯಾಗಿದ್ದ ರೋಹಿತ್ ಶರ್ಮಾ, ಇದೀಗ ಪತ್ನಿ ಜೊತೆ ವಿದೇಶಕ್ಕೆ ಹಾರಿದ್ದಾರೆ. ರೋಹಿತ್ ಇಂಗ್ಲೆಂಡ್ ಸರಣಿ ಮುನ್ನವೇ ಕೊಂಚ ರಿಲಾಕ್ಸ್​​​​​ ಆಗಲು ಪತ್ನಿ ರಿತಿಕಾ ಜೊತೆ ಯುನೈಟೆಡ್ ಸ್ಟೇಟ್​​​ನಲ್ಲಿ ಸುತ್ತಾಡುತ್ತಿದ್ದಾರೆ. ಆದ್ರೆ ಇಂಟ್ರಸ್ಟಿಂಗ್ ವಿಷ್ಯಾ ಏನಪ್ಪಾ ಅಂದ್ರೆ ಸದಾ ಲೈಟ್ ಗಡ್ಡ ಬಿಟ್ಟುಕೊಂಡಿರುತ್ತಿದ್ದ ರೋಹಿತ್​​​​​​​​, ಫಾರಿನ್​​​​​​​​ ಟ್ರಿಪ್​​​​​​​​​ಗೆ ತೆರಳಿದ ಮೇಲೆ ಗೆಟಪ್ ಚೇಂಜ್ ಮಾಡ್ಕೊಂಡಿದ್ದು, ಕ್ಲೀನ್ ಶೇವ್ ಮಾಡಿಸಿಕೊಂಡು ಯಂಗ್​​ ಆಗಿ ಕಾಣುತ್ತಿದ್ದಾರೆ. ಶರ್ಮಾ ನ್ಯೂ ಗೆಟಪ್​​​​​​​​ನ್ನ ಪತ್ನಿ ರಿತಿಕಾ ತಮ್ಮ ಇನ್ಸ್​​ಟಾಗ್ರಾಂನಲ್ಲಿ ಹರಿಬಿಟ್ಟಿದ್ದಾರೆ.
ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗಾಗಿ ಸಂಪರ್ಕಿಸಿ: contact@firstnews.tv