2019ರ ವಿಶ್ವಕಪ್​ನಲ್ಲಿ ರೋಹಿತ್ ಶರ್ಮಾ ಟೀಮ್ ಇಂಡಿಯಾವನ್ನ ಮುನ್ನಡೆಸಬೇಕು..!

2019ರ ಇಂಡಿಯನ್ ಪ್ರೀಮಿಯರ್ ಲೀಗ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪಾಲಿಗೆ ಮುಳ್ಳಿನ ಹಾದಿಯಂತಾಗಿದೆ. ಆಡಿರೋ 6 ಪಂದ್ಯಗಳಲ್ಲಿ ಒಂದೇ ಒಂದು ಪಂದ್ಯವನ್ನ ಗೆಲ್ಲದ ಆರ್​ಸಿಬಿ, ಪಾಯಿಂಟ್ ಟೇಬಲ್​ನಲ್ಲಿ ಕೊನೆಯ ಸ್ಥಾನದಲ್ಲಿದೆ. ಕೊಲ್ಕತ್ತಾ ವಿರುದ್ಧ 205 ರನ್​ಗಳಿಸಿದ್ರೂ, ಆರ್​ಸಿಬಿ ಆ ಬಿಗ್ ಸ್ಕೋರ್​ಅನ್ನ ಡಿಫೆಂಡ್ ಮಾಡಿಕೊಳ್ಳಲು ಸಾಧ್ಯವಾಗಲಿಲ್ಲ. ಹೀಗಾಗಿ ಕ್ರಿಕೆಟ್​ ಅಭಿಮಾನಿಗಳು, ಆರ್​ಸಿಬಿ ಕ್ಯಾಪ್ಟನ್ ವಿರಾಟ್ ಕೊಹ್ಲಿಯನ್ನ ಹಿಗ್ಗಾಮುಗ್ಗಾ ಟೀಕಿಸುತ್ತಿದ್ದಾರೆ. ಅಲ್ಲದೇ, ಮುಂಬರುವ ಏಕದಿನ ವಿಶ್ವಕಪ್​ನಲ್ಲಿ ಟೀಮ್ ಇಂಡಿಯಾ ನಾಯಕತ್ವದಿಂದ ಕೆಳಗಿಳಿದು, ರೋಹಿತ್ ಶರ್ಮಾಗೆ ತಂಡವನ್ನ ಮುನ್ನಡೆಸಲು ಅವಕಾಶ ಮಾಡಿಕೊಡಬೇಕು ಅಂತ ಆಗ್ರಹಿಸುತ್ತಿದ್ದಾರೆ. ಸದ್ಯ ಐಪಿಎಲ್​ನಲ್ಲಿ ರೋಹಿತ್ ನಾಯಕತ್ವದಲ್ಲಿ ಮುಂಬೈ ಇಂಡಿಯನ್ಸ್, ಉತ್ತಮ ಪ್ರದರ್ಶನ ನೀಡುತ್ತಿದೆ. ಹೈದ್ರಾಬಾದ್ ವಿರುದ್ಧ 135 ರನ್ ಡಿಫೆಂಡ್ ಮಾಡಿಕೊಂಡ ರೋಹಿತ್ ನಾಯಕತ್ವವನ್ನ, ಅಭಿಮಾನಿಗಳು ಕೊಂಡಾಡುತ್ತಿದ್ದಾರೆ.