ಆ 22 ವರ್ಷದ ಯುವಕನನ್ನು ಕಂಡು ರೋಹಿತ್ ಶರ್ಮಾ ಹೆದರಿದ್ಯಾಕೆ…?

ಭಾರತದಲ್ಲಿ ಟ್ಯಾಲೆಂಟೆಡ್​ ಕ್ರಿಕೆಟ್​ ಆಟಗಾರರಿಗೇನು ಕೊರತೆ ಇಲ್ಲ. ಆದ್ರೆ ಎಲ್ಲಾ ಆಟಗಾರರಿಗೆ ಸೂಕ್ತ ಅವಕಾಶ ಸಿಗುವುದಿಲ್ಲ. ಇನ್ನೂ ಹಲವರು ಸಿಕ್ಕ ಚಿಕ್ಕ ಅವಕಾಶಗಳಲ್ಲೇ ತಮ್ಮ ಪ್ರತಿಭೆ ಮೂಲಕ ಮಿಂಚು ಹರಿಸುತ್ತಾರೆ. ಈಗ ಕರ್ನಾಟದಕ ಪ್ರಮೋದ್ ಗೌಡ ಎಂಬ ಯುವ ಆಟಗಾರ ತನ್ನ ಸ್ಪಿನ್ ಜಾದೂವಿನ ಮೂಲಕ ಗಮನಸೆಳೆದಿದ್ದಾನೆ.
22 ವರ್ಷದ ಈ ಯುವ ಆಟಗಾರನ ಸ್ಪಿನ್ ಮೋಡಿಗೆ ಹಿಟ್​ಮ್ಯಾನ್ ರೋಹಿತ್ ಶರ್ಮಾ ಕಕ್ಕಾಬಿಕ್ಕಿಯಾಗಿದ್ದಾರೆ. ಏಷ್ಯಾಕಪ್​ಗಾಗಿ ಟೀಮ್ ಇಂಡಿಯಾ ಬೆಂಗಳೂರಿನಲ್ಲಿ ಪ್ರಾಕ್ಟೀಸ್​ ನಡೆಸುವಾಗ ಪ್ರಮೋದ್​ ಗೌಡ ರೋಹಿತ್​ ಬೌಲ್ ಮಾಡಿದ್ರು. ಈ ಹಳೆ ವಿಡೀಯೋ ಸದ್ಯ ಸೋಷಿಯಾ ಮೀಡಿಯಾಗಳಲ್ಲಿ ಹಲ್​ಚಲ್ ಸೃಷ್ಟಿಸಿದೆ. ಈ ವಿಡೀಯೋದಲ್ಲಿ ಪ್ರಮೋದ್​ ಎಸೆದ ಮೊದಲ ಎರಡು ಎಸೆತಗಳಿಗೆ ಡಿಫೆನ್ಸ್ ಮಾಡುವ ರೋಹಿತ್​, ಮೂರನೇ ಎಸೆತದ ಮರ್ಮ ಅರಿಯುವಲ್ಲಿ ವಿಫಲವಾಗಿ ಕ್ಲೀನ್ ಬೌಲ್ಡ್​ ಆಗುತ್ತಾರೆ.
ಕೆಎಸ್​ಸಿಎ ನೆಟ್ ಬೌಲರ್​ ಆಗಿರುವ ಪ್ರಮೋದ್​ ಬೌಲಿಂಗ್ ಶೈಲಿ ಅಪ್ಘಾನಿಸ್ತಾನದ ಸ್ಪಿನ್ನರ್​ ರಶೀದ್​​ ಬೌಲಿಂಗ್ ಶೈಲಿಯನ್ನ ಹೋಲುತ್ತೆ. ಯಾರ ಬಳಿಯೂ ತರಬೇತಿ ಪಡೆಯದ ಪ್ರಮೋದ್​ ಸ್ವಂತ ಪರಿಶ್ರಮದಿಂದ ಸ್ಪಿನ್ ಪಟ್ಟುಗಳನ್ನ ಕಲಿತಿದ್ದಾರೆ.
ತಮ್ಮ ವಿಡೀಯೋ ವೈರಲ್ ಆಗಿದ್ದಕ್ಕೆ ಪ್ರಮೋದ್ ಸಖತ್ ಥ್ರಿಲ್ ಆಗಿದ್ದಾರೆ. ಪ್ರಮೋದ್ ಹಲವು ಬಾರಿ ನೆಟ್ ಪ್ರಾಕ್ಟೀಸ್​ ವೇಳೆ ರೋಹಿತ್ ಶರ್ಮಾರನ್ನ ಔಟ್ ಮಾಡಿದ್ದೇನೆ. ನನ್ನ ಬೌಲಿಂಗ್​ಗೆ ರೋಹಿತ್ ಫಿಧಾ ಆಗಿದ್ದಾರೆ. ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈವರೆಗೂ ಕ್ಯಾಪ್ಟನ್ ವಿರಾಟ್ ಕೊಹ್ಲಿ ಬಿಟ್ಟ ಟೀಮ್ ಇಂಡಿಯಾದ ಎಲ್ಲಾ ಬ್ಯಾಟ್ಸ್​ಮನ್​ಗಳಿಗೆ ಬೌಲಿಂಗ್ ಮಾಡಿದ್ದೇನೆ. ಕೊಹ್ಲಿಗೆ ಬೌಲ್​ ಮಾಡೋದು ನನ್ನ ಆಸೆ. ಕೊಹ್ಲಿ ನನ್ನ ಬೌಲಿಂಗ್​ಗೆ ಮೆಚ್ಚುಗೆ ಸೂಚಿಸುವ ವಿಶ್ವಾಸ ಇದೆ ಎಂದಿದ್ದಾರೆ.