ಪವರ್‌ಸ್ಟಾರ್ ‘ಕವಲುದಾರಿ’ಗೆ ರಾಕಿಂಗ್ ಸ್ಟಾರ್ ವಿಶ್‌

ಪವರ್‌ಸ್ಟಾರ್ ಪುನೀತ್‌ರಾಜ್‌ಕುಮಾರ್ ಅವರ ಪಿ ಆರ್ ಕೆ ಪ್ರೊಡಕ್ಷನ್ಸ್‌ನಲ್ಲಿ ನಾಳೆ ತೆರೆಕಾಣ್ತಿರೋ ಕವಲುದಾರಿ ಸಿನಿಮಾಗೆ ರಾಕಿಂಗ್ ಸ್ಟಾರ್ ಯಶ್ ಶುಭ ಹಾರೈಸಿದ್ದಾರೆ.

‘ಪುನೀತ್‌ ರಾಜ್‌ಕುಮಾರ್ ಅವರ ಪಿ ಆರ್ ಕೆ ಪ್ರೊಡಕ್ಷನ್ಸ್‌ ನಲ್ಲಿ ಇದೇ ಮೊದಲ ಬಾರಿಗೆ ಕವಲುದಾರಿ ಅನ್ನೋ ಸಿನಿಮಾ ಬರ್ತಿದೆ. ಹೇಮಂತ್ ಅವರು ಡೈರೆಕ್ಟ್ ಮಾಡಿದ್ದಾರೆ. ರಿಷಿ ನಟಿಸಿದ್ದಾರೆ. ಎಲ್ಲದಕ್ಕಿಂತ ಹೆಚ್ಚಾಗಿ ನಮ್ ಅನಂತ್‌ನಾಗ್ ಸರ್ ಇದ್ದಾರೆ. ಕನ್ನಡದ ಹೆಮ್ಮೆಯ ಮೇರು ನಟ ಅವರು. ತುಂಬಾ ಇಂಟರೆಸ್ಟಿಂಗ್ ತಂಡ. ಜೊತೆಗೆ ಪುನೀತ್‌ ರಾಜ್‌ಕುಮಾರ್‌ ಅವರು ಸ್ವತಃ ದೊಡ್ಡ ಸ್ಟಾರ್ ಆಗಿ ಇನ್ನೊಂದು ಸಿನಿಮಾ ನಿರ್ಮಾಣ ಮಾಡ್ತಾರೆ ಅಂದ್ರೆ,ಎಷ್ಟು ಚೆನ್ನಾಗಿ ಕಥೆ ಮೂಡಿಬಂದಿರಬೇಕು. ನೋಡೋಕೆ ನಾನಂತೂ ಎಗ್ಸೈಟ್ ಆಗಿದ್ದೀನಿ. ಎಲ್ರೂ ಈ ಸಿನಿಮಾ ನೋಡಿ. ಅಪ್ಪು ಸರ್,ಆಲ್ ದಿ ಬೆಸ್ಟ್ ಇನ್ನೂ ಹಲವಾರು ಸಿನಿಮಾಗಳು ನಿಮ್ಮ ಸಂಸ್ಥೆಯಿಂದ ಬರಲಿ. ಗುಡ್ ಲಕ್’ ಅಂತಾ ಹೇಳಿ ವಿಶ್ ಮಾಡಿದ್ದಾರೆ.

ಪುನೀತ್ ಹಾಗೂ ನಟ ಯಶ್ ಇಬ್ರೂ ಸ್ಟಾರ್ ನಟರಾದ್ರೂ ಇಬ್ರೂ ಮೊದ್ಲಿಂದಲೂ ಪರಸ್ಪರ ಸಿನಿಮಾಗಳಿಗೆ ಶುಭ ಹಾರೈಸ್ತಾರೆ. ಈ ಹಿಂದೆ ಯಶ್ ಅಭಿನಯದ ಬ್ಲಾಕ್‌ ಬಸ್ಟರ್ ಚಿತ್ರ ಕೆ.ಜಿ.ಎಫ್‌ ಗೆ ಪುನೀತ್ ಶುಭ ಕೋರಿದ್ರು. ಅಪ್ಪು ಅಭಿನಯಸಿದ್ದ ‘ನಟಸಾರ್ವಭೌಮ’ ಚಿತ್ರ ಅಭಿಮಾನಿಗಳ ಮನತಣಿಸಿ, ಪ್ರೇಕ್ಷಕರ ಮನಗೆದ್ದು ಯಶಸ್ವಿಯಾಗಲಿ ಎಂದು ಹಾರೈಸುತ್ತೇನೆ ಅಂತಾ ಯಶ್ ವಿಶ್ ಮಾಡಿದ್ರು. ಹೇಮಂತ್‌ರಾವ್ ನಿರ್ದೇಶನ, ಅನಂತ್‌ನಾಗ್, ರಿಷಿ ನಟಿಸಿರೋ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ ನಾಳೆ ರಾಜ್ಯಾದ್ಯಂತ ತೆರೆ ಕಾಣ್ತಿದೆ.