ಪ್ರೀತಿಯಿಂದ ಕರೆದ ಅಜ್ಜಿ ಮನೆಗೆ ಹೋಗಿ ಆಶೀರ್ವಾದ ಪಡೆದ ರಾಕಿಂಗ್ ಸ್ಟಾರ್..!

ಮಂಡ್ಯ: ಇವತ್ತು ರಾಕಿಂಗ್​ ಸ್ಟಾರ್ ಯಶ್, ಸುಮಲತಾ ಅಂಬರೀಶ್ ಪರ ಜಿಲ್ಲೆಯ ಮದ್ದೂರು ತಾಲೂಕಿನ ವಿವಿಧ ಗ್ರಾಮಗಳಲ್ಲಿ ಪ್ರಚಾರ ನಡೆಸಿದ್ರು. ಅದ್ರಂತೆ ಯಶ್, ಅಣ್ಣಹಳ್ಳಿ ದೊಡ್ಡಿ ಗ್ರಾಮಕ್ಕೆ ಭೇಟಿ ನೀಡಿದ್ರು. ಆಗ ಕೆಂಪಮ್ಮ ಅನ್ನೋ ಅಜ್ಜಿ, ‘ತಮ್ಮ ಮನೆಗೆ ಬರುವಂತೆ’ ಯಶ್​ಗೆ ಮನವಿ ಮಾಡಿಕೊಂಡ್ರು. ಪ್ರೀತಿಯಿಂದ ಅಜ್ಜಿ ಕರೆಗೆ ಓಕೆ ಎಂದ ಯಶ್​, ಅವ್ರ ಮನೆಗೆ ಹೋಗಿ ಆಶೀರ್ವಾದ ಪಡೆದ್ರು. ಅಲ್ಲದೇ ಅವ್ರ ಮನೆಯಲ್ಲಿ ಬಾಳೆ ಹಣ್ಣು ಸೇವಿಸಿ, ಸುಮಲತಾಗೆ ವೋಟ್ ಹಾಕುವಂತೆ ಮನವಿ ಮಾಡಿ ವಾಪಸ್ ಆದರು.


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv