ನಾವು ನಮ್ಮ ಅಪ್ಪ, ತಾತನ ಆಸ್ತಿಯಲ್ಲಿ ಬದುಕಿಲ್ಲ: ನಿಖಿಲ್​ಗೆ ಯಶ್​ ಟಾಂಗ್​

ಮದ್ದೂರು: ನಾವೆಲ್ಲ ಬಡವರು, ನಮಗೆ ಯೊಗ್ಯತೆ ಇಲ್ಲ. ನಾವು ನಮ್ಮ ಅಪ್ಪ, ತಾತನ ಆಸ್ತಿಯಲ್ಲಿ ಬದುಕಿಲ್ಲ. ಯೋಗ್ಯತೆ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ ಎಂದು ಮಂಡ್ಯ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ನಿಖಿಲ್​ ಕುಮಾರಸ್ವಾಮಿಗೆ , ರಾಕಿಂಗ್​ ಸ್ಟಾರ್​ ಯಶ್​ ಟಾಂಗ್​ ನೀಡಿದ್ದಾರೆ. ಯರಗನಹಳ್ಳಿಯಲ್ಲಿ ಮಾತನಾಡಿದ ಯಶ್, ಭ್ರಷ್ಟಾಚಾರವಿಲ್ಲದೆ ಕೆಲಸ ಮಾಡಿರೋ ಅಂಬರೀಶಣ್ಣನವರ ಹೆಂಡತಿ ಸುಮಲತಾ ಅವರಿಗೆ ಮತ ಹಾಕಿ ಗೆಲ್ಲಿಸಿ ಸ್ವಾಭಿಮಾನವನ್ನ ಉಳಿಸಿ. ದುಡ್ಡಿನಿಂದ ಯಾರನ್ನೂ ಕೊಂಡುಕೊಳ್ಳುವುದಕ್ಕೆ ಸಾಧ್ಯವಿಲ್ಲ ಎಂದು ಹೇಳಿದ್ರು. ಈ ಹಿಂದೆ ನಿಖಿಲ್ ಕುಮಾರಸ್ವಾಮಿ, ಬಾಡಿಗೆ ಕಟ್ಟದವರು ನಮ್ಮ ಬಗ್ಗೆ ಮಾತಾಡ್ತಾರೆ ಎಂದು ಹೇಳಿಕೆ ನೀಡಿದ್ದ ಹಿನ್ನೆಲೆ ಇಂದು ಯಶ್​ ತಿರುಗೇಟು ನೀಡಿದ್ರು.

ಇದನ್ನೂ ಓದಿ: ತಾತ ಪ್ರಧಾನಿಯಾದಾಗ ಬಾಡಿಗೆ ಮನೆಯಲ್ಲಿದ್ವಿ, ಬಾಡಿಗೆ ಕಟ್ಟದವ್ರು ನಮ್ ಬಗ್ಗೆ ಮಾತಾಡ್ತಾರೆ’: ನಿಖಿಲ್

 


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv