ಮಡದಿ, ಮಗುಗಾಗಿ ತಾವೇ ಅಡುಗೆ ಮಾಡಿದ್ರು ಯಶ್!

ರಾಕಿಂಗ್ ಸ್ಟಾರ್ ಯಶ್ ತಮ್ಮ ಮುದ್ದಾದ ಮಡದಿ, ತುಂಬು ಗರ್ಭಿಣಿ ರಾಧಿಕಾಗೆ ತಾವೇ ತಮ್ಮ ಕೈಯಾರೆ ಅಡುಗೆ ಮಾಡಿ ಬಡಿಸಿದ್ದಾರೆ. ಯಶ್ ಪ್ರೊಫೆಷನಲ್ ಶೆಫ್‌ ಮಾದರಿ ತಲೆ ಮೇಲೆ ಟೋಪಿ, ಒಂದು ಕೈನಲ್ಲಿ ಫ್ರೈಯಿಂಗ್‌ ಪ್ಯಾನ್, ಇನ್ನೊಂದು ಕೈನಲ್ಲಿ ಸೌಟು ಹಿಡಿದು ಫುಲ್ ಕಾನ್ಸಂಟ್ರೇಶನ್‌ನಲ್ಲಿ ಅಡುಗೆ ಮಾಡ್ತಿರೋ ಫೋಟೋನ ಅಪ್ಲೋಡ್ ಮಾಡಿ ತಮ್ಮ ಖುಷಿಯನ್ನ ಅಭಿಮಾನಿಗಳ ಜೊತೆ ಫೇಸ್‌ಬುಕ್‌ ಮೂಲಕ ಹಂಚಿಕೊಂಡಿದ್ದಾರೆ.
ನನ್ನ ಪತಿ ನನಗೋಸ್ಕರ ಅಡುಗೆ ಮಾಡೋಕೆ ಮುಂದಾದಾಗ.. ಮಿಸ್ಟರ್ ರಾಕಿಂಗ್ ಸ್ಟಾರ್.. ಅಂತ ಹೇಳಿ ದಿಲ್‌ಖುಷ್ ಆಗಿದ್ದಾರೆ. ಈ ಫೋಟೋ ನೋಡಿದ್ರೆ ಯಶ್-ರಾಧಿಕಾ ಬೇಬಿಮೂನ್‌ ಆಚರಿಸೋಕೆ ಅಂಡಮಾನ್ ದ್ವೀಪಕ್ಕೆ ಹೋದಾಗ ರೆಸ್ಟೋರೆಂಟ್‌ವೊಂದ್ರಲ್ಲಿ ತೆಗೆದಿರೋ ಹಾಗಿದೆ. ಅಲ್ಲಿ ಶೆಫ್‌, ರುಚಿಕರ ಅಡುಗೆ ತಯಾರು ಮಾಡ್ತಿರುವಾಗ, ತಾನೇ ತನ್ನ ಪ್ರೀತಿಯ ಪತ್ನಿಗೆ ಹಾಗೂ ಆಕೆ ಹೊಟ್ಟೆಯೊಳಗಿರೋ ನಮ್ಮ ಮಗುವಿಗೆ ಅಡುಗೆ ಮಾಡ್ತೀನಿ, ರುಚಿಕರವಾಗಿ ಅಡುಗೆ ಮಾಡಿ ಬಸುರಿ ಬಯಕೆ ತೀರಿಸ್ತೀನಿ ಅಂತಾ ಹೆಲ್ದಿ ಅಡುಗೆ ಮಾಡಿರೋ ಹಾಗಿದೆ ರಾಕಿಂಗ್ ಸ್ಟಾರ್ ಯಶ್.
ಇದನ್ನ ನೋಡಿ, ವಾರೆ ವಾ ರಾಕಿಂಗ್ ಸ್ಟಾರ್, ಏನೇ ಆಗಲಿ, ಸೆಲೆಬ್ರಿಟಿಯಾದ್ರೇನು? ಮುದ್ದಿನ ಮಡದಿ ಗರ್ಭಿಣಿಯಾದಾಗ ಆಕೆಯ ಬೇಕುಬೇಡಗಳನ್ನ ಇಷ್ಟು ಚೆನ್ನಾಗಿ ಅರ್ಥ ಮಾಡ್ಕೊಂಡು ಟೈಮ್ ಕೊಡ್ತಿದ್ದೀರಲ್ಲ.. ಸುಖವಾಗಿರಿ ನೀವು ಅಂತಾ ಹರಸುತ್ತಿದ್ದಾರೆ ಅಭಿಮಾನಿಗಳು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv