ರಾಬರ್ಟ್​​​ ಶೂಟಿಂಗ್​ ಮುಂದಕ್ಕೆ, ಕಾರಣ ಇದು..!!!

ಎಲೆಕ್ಷನ್​ ಮುಗಿದ ಮರುದಿನವೇ ಚಾಲೆಂಜಿಂಗ್​ ಸ್ಟಾರ್​ ದರ್ಶನ್​ ಅಭಿನಯದ ಮುಂದಿನ ಸಿನಿಮಾ ರಾಬರ್ಟ್​ ಶೂಟಿಂಗ್​ ಶುರುವಾಗಬೇಕಿತ್ತು. ಆದ್ರೆ ಎಲೆಕ್ಷನ್​ ಮುಗಿದ ಬಳಿಕ ಸಿನಿಮಾದ ಸುದ್ದಿ ಹೊರಬಿದ್ದರಲ್ಲಿಲ್ಲ. ಎಲ್ಲವೂ ಅಂದುಕೊಂಡಂತೆ ಆಗಿದ್ರೆ ಇವತ್ತು ರಾಬರ್ಟ್​ ಸಿನಿಮಾದ ಚಿತ್ರೀಕರಣ ಆರಂಭವಾಗಬೇಕಿತ್ತು. ಆದ್ರೆ ರಾಬರ್ಟ್​ ಸಿನಿಮಾದ ಚಿತ್ರೀಕರಣ ಒಂದು ವಾರ ಮುಂದಕ್ಕೆ ಹೋಗಿದೆ.ಮುಂದಿನ ಸೋಮವಾರದಿಂದ ರಾಬರ್ಟ್​ ಸಿನಿಮಾದ ಚಿತ್ರೀಕರಣ ಶುರುವಾಗಲಿದೆ. ಉಮಾಪತಿ ಶ್ರೀನಿವಾಸ್​ ನಿರ್ಮಾಣ ಮಾಡಿ, ತರುಣ್​ ಸುಧೀರ್​ ಆ್ಯಕ್ಷನ್​​​​​ ಕಟ್​ ಹೇಳ್ತಿರೋ ಸಿನಿಮಾ ಶೂಟಿಂಗ್, ಮುಂದಿನ ಸೋಮವಾರದಿಂದ ಶುರುವಾಗಲಿದೆ. ನಂತ್ರ ಒಂದೇ ಶೆಡ್ಯುಲ್​ನಲ್ಲಿ ಬ್ರೇಕ್​ ಇಲ್ಲದೇ 54 ದಿನಗಳಲ್ಲಿ ಮುಕ್ತಾಯವಾಗಲಿದೆ.
ಕೈ ನೋವೇ ಶೂಟಿಂಗ್​ಮುಂದೂಡಲು ಕಾರಣ..!
ದರ್ಶನ್​​ ಬಲಗೈಗೆ ಅಪಘಾತದ ವೇಳೆ ಗಾಯವಾಗಿತ್ತು. ನಂತ್ರ ಕೈ ನೋವಿದ್ರು ಹಲವು ಸಿನಿಮಾಗಳ ಶೂಟಿಂಗ್​ ಮುಗಿಸಿದ್ರು. ಅದಾದ ಬಳಿಕ ಮಂಡ್ಯ ಎಲೆಕ್ಷನ್​ ಭಾಗಿಯಾಗಿದ್ರು, ರಣಬಿಸಿಲಿನಲ್ಲಿ ಎಡಬಿಡದೇ ಪ್ರಚಾರ ಮಾಡಿ, ಲಕ್ಷಾಂತರ ಜನರನ್ನ ಭೇಟಿ ಮಾಡಿದ ದರ್ಶನ್​ಗೆ ಮತ್ತೆ ಕೈ ನೋವು ಕಾಣಿಸಿಕೊಂಡಿದೆ. ಇದೇ ಕಾರಣದಿಂದ ಪ್ರಚಾರದ ಮಧ್ಯೆಯೂ ಜಸ್ಟ್ 1 ದಿನದ ಬಿಡುವು ಪಡೆದಿದ್ರು. ಈಗ ಕೈ ನೋವು ಹೆಚ್ಚಿದು ವೈದ್ಯರ ಸಲಹೆ ಮೇರೆಗೆ ವಿಶ್ರಾಂತಿ ಪಡೆದಿದ್ದಾರೆ. ಜೊತೆಗೆ ಬಿಸಿಲಿನಲ್ಲಿ ಸುತ್ತಾಡಿ ಸ್ವಲ್ಪ ಕಪ್ಪಾಗಿರೋದ್ರಿಂದ ರಾಬರ್ಟ್​​ಗೆ ರೆಡಿಯಾಗಲು ಜಸ್ಟ್ 1 ವಾರ ಟೈಮ್​ ಕೇಳಿದ್ದಾರೆ ದರ್ಶನ್​. ಹಾಗಾಗಿ ಮುಂದಿನ ಸೋಮವಾರದಿಂದ ರಾಬರ್ಟ್​ ಚಿತ್ರೀಕರಣ ಆರಂಭವಾಗಲಿದೆ.