300 ಕೆಜಿ ಬೆಳ್ಳಿ ದರೋಡೆ ಮಾಡಿದ 8 ಆರೋಪಿಗಳು ಅಂದರ್​​..!

ದಾವಣಗೆರೆ: ತಾಲೂಕಿನ ಹುಣಸೇಕಟ್ಟೆ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ 300 ಕೆಜಿ ಬೆಳ್ಳಿ ದರೋಡೆ ಮಾಡಿದ್ದ 8 ಆರೋಪಿಗಳನ್ನ ಪೊಲೀಸರು ಬಂಧಿಸಿದ್ದಾರೆ. ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆಯ ನಿಸಾರ್ (44), ರಾಹುಲ್ (36), ನದೀಮ್ (25), ಜಾಕೀರ್ ಸಾಬ್ (20), ಬಳ್ಳಾರಿಯ ನಾಗರಾಜ್ (46), ಆಂಧ್ರಪ್ರದೇಶ ಮೂಲದ ಶ್ಯಾಮ್ ಸುಂದರ್ (46), ಮನೋಹರ್(45), ಉದಯ್ ಕುಮಾರ್ (36) ಬಂಧಿತ ಆರೋಪಿಗಳು. ಡಿಸೆಂಬರ್ 29 ರಂದು ರಾತ್ರಿ ಮಹಾರಾಷ್ಟ್ರದ ಬೆಳ್ಳಿ ವ್ಯಾಪಾರಿ ಜಗನ್ನಾಥ್​ ಖಂಡೇಕರ್​​ ಅನ್ನೋರು ಕೊಲ್ಲಾಪುರದಿಂದ ಸೇಲಂಗೆ ಬೆಳ್ಳಿ ಸಾಗಿಸುತ್ತಿದ್ದರು. ಈ ವೇಳೆ ರಸ್ತೆ ಮಧ್ಯೆ ಕಾರು ಅಡ್ಡಗಟ್ಟಿ ಬೆದರಿಸಿ, ಬೆಳ್ಳಿ, ನಗದು ದರೋಡೆ ಮಾಡಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ದಾವಣಗೆರೆ ಗ್ರಾಮೀಣ ಠಾಣೆ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ಎಸ್ಪಿ ಆರ್​​.ಚೇತನ್​​ ಹೇಳಿದ್ದಾರೆ.