ಹಳ್ಳ ಹಿಡಿದ ರಸ್ತೆ ಕಾಮಗಾರಿ.. ಬೇಸತ್ತ ಸ್ಥಳೀಯರಿಂದ ಪ್ರೊಟೆಸ್ಟ್..

ಕೋಲಾರ: ನಗರದಲ್ಲಿ ಹಳ್ಳ ಹಿಡಿದಿರುವ ರಸ್ತೆ ಕಾಮಗಾರಿಗಳನ್ನು ಶೀಘ್ರವೇ ಪೂರ್ಣಗೊಳಿಸಿ ಅಂತಾ ಅಲ್ಲಿನ ಸ್ಥಳೀಯರು ಪ್ರತಿಭಟನೆ ನಡೆಸಿ ಆಗ್ರಹಿಸಿದ್ದಾರೆ. ಕೇಂದ್ರ ಸರ್ಕಾರದ ಅಮೃತ್​ ಸಿಟಿ ಯೋಜನೆಯಡಿಯಲ್ಲಿ ಒಳಚರಂಡಿ ಕಾಮಗಾರಿ ನಡೆಯುತ್ತಿದ್ದು, ಡ್ರೈನೇಜ್​ ಪೈಪ್​ ಅಳವಡಿಸಲು ಕೋಲಾರದ ನಗರದ ರಸ್ತೆಗಳೆಲ್ಲವನ್ನೂ ಅಗೆದು ಹಾಕಿದ್ದಾರೆ. ಇದರಿಂದ ಸಾರ್ವಜನಿಕರಿಗೆ ಸಮಸ್ಯೆ ಎದುರಾಗಿದೆ.
ರಸ್ತೆ ಅಗೆದಿದ್ದರಿಂದ ವಾಹನ ಸಂಚರಿಸಲು ಕಷ್ಟ ಆಗ್ತಿದೆ. ಇದ್ರಿಂದ ಅಲ್ಲಿರುವ ಅಂಗಡಿಗಳೆಲ್ಲಾ ಧೂಳುಮಯ ಆಗಿವೆ. ರಸ್ತೆ ಕಾಮಗಾರಿಯಿಂದ ಬೇಸತ್ತಿರುವ ಸ್ಥಳೀಯರು ಸಾರ್ವಜನಿಕರಿಗೆ ಕಾಮಗಾರಿಯಿಂದಾಗಿ ತೊಂದರೆಯಾಗುತ್ತಿದೆ ಎಂದು ಪ್ರತಿಭಟನೆ ನಡೆಸಿದರು. ಕೂಡಲೇ ನಗರಸಭೆ ಹಾಗೂ ಜಿಲ್ಲಾಡಳಿತ ಸಮರ್ಪಕ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಕ್ಕಾಗಿ ಸಂಪರ್ಕಿಸಿ: contact@firstnews.tv