ರಸ್ತೆ ಪರಿಶೀಲನೆಗೆ ಆಗಮಿಸಿದ ಮಹಾನಗರ ಪಾಲಿಕೆ ಅಧಿಕಾರಿಗಳು

ಧಾರವಾಡ: ಸತತ ಮಳೆಯಿಂದಾಗಿ ಕುಸಿದಿದ್ದ ನಗರದ ಕೇಶವನಗರ ರೈಲ್ವೆ ಸ್ಟೇಷನ್​​ಗೆ ಕಲ್ಪಿಸುವ ಸಂಪರ್ಕ ರಸ್ತೆಯನ್ನು ವೀಕ್ಷಣೆ ಮಾಡಲು ಮಹಾನಗರ ಪಾಲಿಕೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದಾರೆ.

ಇತ್ತಿಚೇಗಷ್ಟೆ ಯುಜಿಡಿ ಕಾಮಗಾರಿ ಅಡಿಯಲ್ಲಿ ಡಾಂಬರಿಕರಣ ಮಾಡಲಾಗಿತ್ತು. ಆದ್ರೆ, ಮುಂಗಾರು ಪೂರ್ವದಲ್ಲಿ ಸತತವಾಗಿ ಭಾರೀ ಮಳೆಯಾಗಿತ್ತು. ನಿನ್ನೆ ಸಂಜೆ ಮೂರು ಗಂಟೆ ವೇಳೆ ನಾಲ್ಕು ಅಡಿಗಳಷ್ಟು ರಸ್ತೆ ಕುಸಿದಿದೆ. ಕುಸಿದಿದ್ದ ರಸ್ತೆಗೆ ಮತ್ತೆ ಮಣ್ಣು ತುಂಬುವ ಕೆಲಸ ಪ್ರಾರಂಭಗೊಂಡಿದೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗಾಗಿ ಸಂಪರ್ಕಿಸಿ: contact@firstnews.tv