ಅಪಘಾತದಲ್ಲಿ ಬಾಲಕ ಸಾವು, ಬಸ್ ಸೀಜ್ ಮಾಡಲು ಆದೇಶ

ಚಿತ್ರದುರ್ಗ: ರಸ್ತೆ ಅಪಘಾತವೊಂದರಲ್ಲಿ ಪರಿಹಾರ ನೀಡದ ಹಿನ್ನೆಲೆಯಲ್ಲಿ ನಗರ ಸಾರಿಗೆ ಬಸ್ ಸೀಜ್ ಮಾಡುವಂತೆ ಕೋರ್ಟ್ ಆದೇಶಿಸಿದೆ. ಚಿತ್ರದುರ್ಗದ ಒಂದನೇ ಹೆಚ್ಚುವರಿ ಸತ್ರ ನ್ಯಾಯಾಲಯ ಈ ಆದೇಶ ನೀಡಿದ್ದು, ನಗರ ಸಾರಿಗೆ ಬಸ್ ವಶಕ್ಕೆ ಪಡೆದುಕೊಳ್ಳುವಂತೆ ಪೊಲೀಸರಿಗೆ ನಿರ್ದೇಶಿಸಿದೆ.
ಚಿತ್ರದುರ್ಗ ತಾಲೂಕಿನ ಕೊಳಹಾಳ್ ಗ್ರಾಮದ ಬಳಿ 2016 ರಲ್ಲಿ ಅಪಘಾತ ನಡೆದಿತ್ತು. ಅಪಘಾತದಲ್ಲಿ ಕೊಳಹಾಳ್ ಗ್ರಾಮ ನಿವಾಸಿ ಸರೋಜಮ್ಮ ಎನ್ನುವವರ ಮಗ 12 ವರ್ಷದ ಅಭಿಷೇಕ್ ಸಾವನ್ನಪ್ಪಿದ್ದ. KA 42 F 1899 ನೋಂದಣಿಯ ನಗರ ಸಾರಿಗೆ ಬಸ್​ನಿಂದ ಅಪಘಾತ ಸಂಭವಿಸಿತ್ತು.
ಈ ಕುರಿತಂತೆ ಭರಮಸಾಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದರ ವಿಚಾರಣೆ ನಡೆಸಿದ ಪೊಲೀಸರು ದೋಷಾರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಅದರ ವಿಚಾರಣೆ ನಡೆಸಿದ ನ್ಯಾಯಾಲಯ ಅಪಘಾತ ಪರಿಹಾರ ನೀಡುವಂತೆ ಸಂಬಂಧಪಟ್ಟ ಇಲಾಖೆಗೆ ಸೂಚಿಸಿತ್ತು. ನ್ಯಾಯಾಲಯದ ಸೂಚನೆಯಂತೆ ಪರಿಹಾರ ನೀಡದೇ ಇರುವುದರಿಂದ ಬಸ್ ಸೀಜ್ ಮಾಡುವಂತೆ ನ್ಯಾಯಾಲಯ ಆದೇಶಿಸಿದೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಕ್ಕಾಗಿ ಸಂಪರ್ಕಿಸಿ: contact@firstnews.tv