ಭೀಕರ ರಸ್ತೆ ಅಪಘಾತ ಸ್ಥಳದಲ್ಲೇ ಐವರ ಸಾವು

ಬಳ್ಳಾರಿ: ಸಾರಿಗೆ ಬಸ್ ಹಾಗೂ ಕಾರು ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಕಾರಿನಲ್ಲಿದ್ದ ಐವರು ಸ್ಥಳದಲ್ಲೇ ಸಾವನ್ನಪ್ಪಿರುವ ದಾರುಣ ಘಟನೆ ಬಳ್ಳಾರಿ ತಾಲೂಕು ಕೊಳೂರು ಕ್ರಾಸ್ ಬಳಿ ನಡೆದಿದೆ. ಸಿರಗುಪ್ಪದಿಂದ ಬಳ್ಳಾರಿ ಕಡೆಗೆ ಬರುತ್ತಿದ್ದ ಕಾರು ಮತ್ತು ಬಳ್ಳಾರಿಯಿಂದ ಸಿರುಗುಪ್ಪಕ್ಕೆ ತೆರಳುತ್ತಿದ್ದ ಬಸ್​ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ.

ಪರಿಣಾಮ KA 19 P 6852 ನಂಬರಿನ ಇಂಡಿಕಾ ಕಾರಿನಲ್ಲಿದ್ದ 7 ವರ್ಷದ ಬಾಲಕ, ಹಾಗೂ ಇಬ್ಬರು ಯುವಕರು, ಇಬ್ಬರು ಪುರುಷರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಒಬ್ಬರನ್ನು ಬಳ್ಳಾರಿ ಜಿಲ್ಲೆಯ ಕುರುಗೋಡು ನಿವಾಸಿ ದಾದಾ ಖಲಂದರ್ ಎಂದು ಗುರುತಿಸಲಾಗಿದ್ದು ಇನ್ನುಳಿದವರ ಗುರುತು ಪತ್ತೆಯಾಗಿಲ್ಲ. ಸದ್ಯ ಮೃತದೇಹಗಳನ್ನು ವಿಮ್ಸ್​ ಆಸ್ಪತ್ರೆಗೆ ರವಾನಿಸಲಾಗಿದೆ. ಇನ್ನು ಸ್ಥಳಕ್ಕೆ ಎಸ್​ಪಿ ಅರುಣ್ ರಂಗರಾಜನ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ರು. ಕುರುಗೋಡು ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.