ಆಟೋ ಹಾಗೂ ಬೊಲೆರೋ ಡಿಕ್ಕಿ: ಆಟೋ ಚಾಲಕನ ಸಾವು

ಕೊಡಗು: ಆಟೋ ಹಾಗೂ ಬೊಲೆರೋ ವಾಹನಗಳ ನಡುವೆ ಮುಖಾಮುಖಿ ಡಿಕ್ಕಿ ಹೊಡೆದ ಕಾರಣ ಆಟೋ ಚಾಲಕ  ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ಕಕ್ಕೆಹೊಳೆ ಬಳಿ ನಡೆದಿದೆ. ಗಣೇಶ್(35) ಮೃತ ದುರ್ದೈವಿ. ಸೋಮವಾರಪೇಟೆ ಹೊಸಪೇಟೆ ನಿವಾಸಿ ಗಣೇಶ್​ ಪತ್ನಿ ಹಾಗೂ ಇಬ್ಬರು ಮಕ್ಕಳನ್ನು‌ ಅಗಲಿದ್ದಾರೆ. ಈ ಸಂಬಂಧ ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv