‘ಬಿಜೆಪಿ ಐ.ಟಿ ಇಲಾಖೆ ಜೊತೆ ಮೈತ್ರಿ ಮಾಡಿಕೊಂಡಿದೆ’ -ರಿಜ್ವಾನ್

ಬೆಂಗಳೂರು: ತಮ್ಮ ಆಪ್ತರ ನಿವಾಸದ ಮೇಲೆ ಐಟಿ ದಾಳಿ ಹಿನ್ನೆಲೆ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ರಿಜ್ವಾನ್ ಅರ್ಷದ್ ಪ್ರತಿಕ್ರಿಯಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಬೆಂಗಳೂರು ಸೆಂಟ್ರಲ್ ಕ್ಷೇತ್ರದ ಕಾಂಗ್ರೆಸ್- ಜೆಡಿಎಸ್ ಮೈತ್ರಿ ಅಭ್ಯರ್ಥಿ. ಆದ್ರೆ ಬಿಜೆಪಿಯವರು ಐಟಿ ಇಲಾಖೆ ಜೊತೆ ಮೈತ್ರಿ ಮಾಡಿಕೊಂಡಿದೆ. ಈ ಕ್ಷೇತ್ರದಲ್ಲಿ ಹಾಲಿ ಸಂಸದ ಪಿ.ಸಿ.ಮೋಹನ್​ಗೆ ವಿರೋಧಿ ಅಲೆ ಇದೆ. ಬೆಂಗಳೂರು ಸೆಂಟ್ರಲ್ ಕ್ಷೇತ್ರದ ಜನ ಬದಲಾವಣೆ ಬಯಿಸಿದ್ದಾರೆ. ಸೋಲಿನ ಭೀತಿಯಿಂದಾಗಿ ಬಿಜೆಪಿ ನನಗೆ ಪರಿಚಯ ಇರುವ ವ್ಯಕ್ತಿಗಳ ಮೇಲೆ ಐಟಿ ದಾಳಿ ಮಾಡಿಸಿದೆ ಅಂತಾ ಹೇಳಿದರು. ಬಿಜೆಪಿಯವರು ನಮ್ಮ ಶಾಸಕರಿಗೆ 10 ರಿಂದ 20 ಕೋಟಿ ಆಫರ್ ನೀಡಿ, ಸರ್ಕಾರ ಬೀಳಿಸಲು ಪ್ರಯತ್ನ ಮಾಡಿದ್ದರು. ಈ ಬಗ್ಗೆ ನಾನೇ ಐಟಿ ಇಲಾಖೆಗೆ ಮೂರು ಬಾರಿ ದೂರು ನೀಡಿದ್ದೆ. ಅಭಿವೃದ್ಧಿ ಮಾಡಿದ್ದಿದ್ರೆ, ಬಿಜೆಪಿ ಇಷ್ಟೆಲ್ಲಾ ಮಾಡಬೇಕಿರಲಿಲ್ಲ ಅಂತಾ ಹೇಳಿದ್ರು.

ಖುಷ್ಬೂ ಕಪಾಳ ಮೋಕ್ಷ
ಇದೇ ವೇಳೆ, ಯುವಕನ ಮೇಲೆ ಖುಷ್ಬೂ ಕಪಾಳ ಮೋಕ್ಷ ವಿಚಾರವಾಗಿ ಪ್ರತಿಕ್ರಿಯಿಸಿದ ರಿಜ್ವಾನ್​, ನಿನ್ನೆ ಚುನಾವಣಾ ಪ್ರಚಾರದ ವೇಳೆ ಈ ಘಟನೆ ನಡೆದಿದೆ. ನೂಕು ನುಗ್ಗಲಿನ ವೇಳೆ ಕಿಡಿಗೇಡಿಯೊಬ್ಬ ಆನುಚಿತವಾಗಿ ವರ್ತಿಸಿದ್ದಾನೆ. ಹಾಗಾಗಿ ಖುಷ್ಬೂ ಅವರು ಕಪಾಳಕ್ಕೆ ಹೊಡೆದಿದ್ದಾರೆ. ಇದು ‌ನನಗೆ ಗೊತ್ತಿರಲಿಲ್ಲ. ಅವರು ಪ್ರಚಾರ ಮುಗಿಸಿ ಚೆನ್ನೈಗೆ ಹೊರಡುವಾಗ ಕೇಳಿದಾಗ ಹೇಳಿದರು. ಈ ಬಗ್ಗೆ ಇದುವರೆಗೂ ಯಾರೂ ದೂರು ಕೊಟ್ಟಿಲ್ಲ. ನನ್ನ ಕಡೆಯಿಂದ ದೂರು ಕೊಡುತ್ತೇನೆ. ಆದರೆ, ಇಂತಹ ಘಟನೆಗಳು ನಡೆಯಬಾರದು ಅಂತಾ ಹೇಳಿದರು.


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv