ವಿಶ್ವಕಪ್​ಗೆ ದಿನೇಶ್​ ಕಾರ್ತಿಕ್-ರಿಷಬ್ ಪಂತ್​ ಇಬ್ಬರಲ್ಲಿ ಯಾರು ಬೆಸ್ಟ್..?

ಇಂಗ್ಲೆಂಡ್​ನಲ್ಲಿ ನಡೆಯುವ ವಿಶ್ವಕಪ್​ ಟೂರ್ನಿಗಾಗಿ ನಾಳೆ ಟೀಂ ಇಂಡಿಯಾ ಆಯ್ಕೆ ನಡೆಯಲಿದೆ. ಸಂಜೆ ವೇಳೆಗೆ ತಂಡ ಪ್ರಕಟವಾಗಲಿದೆ.ಹೀಗಾಗಿ ತಂಡದಲ್ಲಿ ಯಾರಿಗೆಲ್ಲಾ ಚಾನ್ಸ್ ಸಿಗಬಹುದು ಎಂದು ಅಭಿಮಾನಿಗಳು ಲೆಕ್ಕಾಚಾರದಲ್ಲಿ ತೊಡಗಿದ್ದಾರೆ.ಆಯ್ಕೆ ಸಮಿತಿಯು ಸಾಕಷ್ಟು ಅಳೆದು ತೂಗಿ ಆಟಗಾರರನ್ನ ಆಯ್ಕೆ ಮಾಡಲು ನಿರ್ಧರಿಸಿದೆ. ಆದರೆ ತಂಡದಲ್ಲಿ ಎಕ್ಸ್​​ಟ್ರಾ ವಿಕೆಟ್​ ಕೀಪರ್ ಬ್ಯಾಟ್ಸ್​​ಮನ್​ ಸ್ಥಾನದಲ್ಲಿ, ಯಾರನ್ನ ಆಯ್ಕೆ ಮಾಡಬೇಕು ಅನ್ನೋದು ಆಯ್ಕೆ ಸಮಿತಿಗೆ ತಲೆನೋವಾಗಿದೆ.ಈ ಸ್ಥಾನಕ್ಕಾಗಿ ಯುವ ಆಟಗಾರ ರಿಷಬ್ ಪಂತ್ ಹಾಗು ಅನುಭವಿ ದಿನೇಶ್​ ಕಾರ್ತಿಕ್ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ.ಟೆಸ್ಟ್​​ ಫಾರ್ಮೆಟ್​​ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿರುವ ರಿಷಬ್​, ಏಕದಿನ ಪಂದ್ಯಗಳಲ್ಲಿ ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದಾರೆ.ಇತ್ತೀಚೆಗೆ ತವರಿನಲ್ಲಿ ನಡೆದ ಏಕದಿನ ಸರಣಿಯಲ್ಲಿ ಪಂತ್​​ ಫೇಲ್ಯೂರ್ ಆಗಿದ್ರು.ಆದ್ರೆ ಸದ್ಯ ನಡೆಯುತ್ತಿರುವ ಐಪಿಎಲ್​12ರಲ್ಲಿ ಪಂತ್​ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ದಿನೇಶ್​ ಕಾರ್ತಿಕ್ ಸಹ ಆಸ್ಟ್ರೇಲಿಯಾದಲ್ಲಿ ನಡೆದ ಏಕದಿನ ಸರಣಿಯಲ್ಲಿ ವೈಫಲ್ಯ ಅನುಭವಿಸಿದ್ರು. ಹೀಗಾಗಿ ಇಬ್ಬರಲ್ಲಿ ಯಾರಿಗೆ ವಿಶ್ವಕಪ್​ ಆಡುವ ಅದೃಷ್ಟ ಒಲಿಯಲಿದೆ ಅನ್ನೋದು ಕುತೂಹಲ ಮೂಡಿಸಿದೆ.ಆದ್ರೆ ಭವಿಷ್ಯದ ದೃಷ್ಟಿಯಿಂದ ಆಯ್ಕೆದಾರರು ಪಂತ್​ಗೆ ಮಣೆ ಹಾಕುವ ಸಾಧ್ಯತೆ ಹೆಚ್ಚಿದೆ ಎನ್ನಲಾಗ್ತಿದೆ.