ಈಗಲೇ ಹೊಗಳಬೇಡಿ, ಇನ್ನೂ ಸಾಕಷ್ಟು ಕಲಿಯುವುದಿದೆ..!

ಟೀಮ್​ ಇಂಡಿಯಾ ವಿಕೆಟ್​ ಕೀಪರ್​ ಬ್ಯಾಟ್ಸ್​​ಮನ್​ ರಿಷಬ್​ ಪಂತ್​ ಪರ್ಫಾರ್ಮನ್ಸ್​ನೆ ಕ್ರಿಕೆಟ್​ ಜಗತ್ತು ಫಿದಾ ಆಗಿದೆ. ಈಗಾಗಲೇ ಪಂತ್​ ಆಟಕ್ಕೆ ಮನಸೋತಿರುವ ಅಭಿಮಾಣಿಗಳು ಧೋನಿಯ ಉತ್ತರಾಧಿಕಾರಿ ಪಂತ್​ ಅಂತ ಬಿಂಭಿಸುತ್ತಿದ್ದಾರೆ. ಇತ್ತ ಪಂತ್​ ಪ್ರದರ್ಶನ ಕುರಿತು ಮಾತನಾಡಿರುವ ಮಾಜಿ ವಿಕೆಟ್​ ಕೀಪರ್​​ ಫಾರೋಕ್ ಎಂಜಿನಿಯರ್​​, ಪಂತ್​ ಕಲಿಯುವುದು ತಂಬಾ ಇದೆ ಎಂದಿದ್ದಾರೆ. ಪಂತ್​ ಪ್ರದರ್ಶನದ ಬಗ್ಗೆ ಮಾತನಾಡಿರುವ ಫಾರೋಕ್​, ಈಗಲೇ ಪಂತ್​ರನ್ನ ಅಷ್ಟು ಹೊಗಳ ಬೇಡಿ. ತಾಂತ್ರಿಕವಾಗಿ ಪಂತ್​ ಇನ್ನು ಸಾಕಷ್ಟು ಕಲಿಯಬೇಕಿದೆ ಎಂದಿದ್ದಾರೆ. ಇತ್ತೀಚಿಗಷ್ಟೇ ಆಸ್ಟ್ರೇಲಿಯಾ ವಿರುದ್ಧ 4 ಟೆಸ್ಟ್​ ಪಂದ್ಯಗಳಲ್ಲಿ ಭಾಗವಹಿಸಿದ್ದ ರಿಷಬ್​​ ಪಂತ್, ವಿಕೆಟ್​ ಕೀಪಿಂಗ್​ ಜೊತೆಗೆ ಬ್ಯಾಟಿಂಗ್​ನಲ್ಲೂ ಕಮಾಲ್​ ಮಾಡಿದ್ರು. ಟೂರ್ನಿಯಲ್ಲಿ 350 ರನ್ ಕಲೆಹಾಕುವ ಮೂಲಕ ಎರಡನೇ ಅತಿಹೆಚ್ಚು ಸ್ಕೋರ್​ ಸಿಡಿಸಿದ್ದಲ್ಲದೇ, ವಿಕೆಟ್ ಹಿಂದೆ 20 ಕ್ಯಾಚ್​ ಪಡೆದಿದ್ರು. ಈ ಮೂಲಕ ಟೆಸ್ಟ್​​ ಸರಣಿ ಒಂದರಲ್ಲಿ ಅತಿ ಹೆಚ್ಚು ಕ್ಯಾಚ್​ ಪಡೆದ ವಿಕೆಟ್​ ಕೀಪರ್​ ಎನ್ನುವ ದಾಖಲೆಯನ್ನು ನಿರ್ಮಿಸಿದ್ರು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: conatct@firstnews.tv