ಹುಟ್ಟೂರಿನಲ್ಲಿ ವೋಟ್​ ಹಾಕಿದ ರಿಷಭ್​ ಶೆಟ್ಟಿ

ರಾಜ್ಯದಲ್ಲಿ ಇಂದು 2ನೇ ಹಂತದ ಚುನಾವಣೆ ನಡೀತಾ ಇದ್ದು, ರಾಜ್ಯಾದ್ಯಂತ ಮತದಾನ ಬಿರುಸಿನಿಂದ ಸಾಗ್ತಾ ಇದೆ. ಈ ನಡುವೆ ಬೈಂದೂರಿನ ಕೆರಾಡಿ ಗ್ರಾಮದಲ್ಲಿ ಕನ್ನಡದ ಸಧ್ಯದ ಟ್ರೆಂಡಿಂಗ್​ ನಿರ್ದೇಶಕ ರಿಷಭ್​ ಶೆಟ್ಟಿ ಓಟ್​ ಹಾಕಿದ್ದಾರೆ. ಎಲ್ಲರಂತೆ ಕ್ಯೂ ನಲ್ಲಿ ನಿಂತು ಓಟ್​ ಹಾಕಿದ್ದಾರೆ. ನಮ್ಮ ಡೆಮಾಕ್ರಸಿಯಲ್ಲಿ ಓಟ್​ ಮಾಡೋದ್ರಿಂದ ಅಷ್ಟೆ ಬದಲಾವಣೆ ತರೋದಕ್ಕೆ ಸಾಧ್ಯ ಅಂತ ರಿಷಭ್​ ಹೇಳ್ತಾರೆ. ಸದ್ಯ ಶೂಟಿಂಗ್​ನಲ್ಲಿ ಬ್ಯುಸಿಯಾಗಿದ್ರು ತಮ್ಮ ಹುಟ್ಟೂರು ಉಡುಪಿ ಜಿಲ್ಲೆಯ ಕೆರಾಡಿಯಲ್ಲಿ ಮತಚಲಾವಣೆ ಮಾಡಿ ಬಂದಿದ್ದಾರೆ.