ಲಂಡನ್​​ನಿಂದ ವಿಮಾನದಲ್ಲಿ ಪಿಜ್ಜಾ ಡೆಲಿವರಿ ತರಿಸಿಕೊಳ್ತಾರೆ ನೈಜೀರಿಯಾ ಶ್ರೀಮಂತರು..!

ಜಗತ್ತಿನಲ್ಲಿ ತುಂಬಾ ಮುಂದುವರಿದ ರಾಷ್ಟ್ರಗಳಲ್ಲಿ ಜನರು ಐಷಾರಾಮಿ ಜೀವನವನ್ನ ನಡೆಸುತ್ತಿದ್ದಾರೆ. ಆದ್ರೆ ಇನ್ನೂ ಕೆಲವು ಹಿಂದುಳಿದ ದೇಶಗಳಲ್ಲಿ ಅನ್ನ, ನೀರು, ಬಟ್ಟೆಗೂ ಪರದಾಡುವ ಜನರಿದ್ದಾರೆ. ಅಂಥ ರಾಷ್ಟ್ರಗಳಲ್ಲಿ ನೈಜೀರಿಯಾ ಕೂಡ ಒಂದು. ಕಳೆದ ಕೆಲವು ವರ್ಷಗಳ ಹಿಂದೆ ನೈಜೀರಿಯಾದಲ್ಲಿ ಕಡುಬಡತನದಲ್ಲಿರೋ ಜನರ ಸಂಖ್ಯೆ ಭಾರತ ಹಾಗೂ ಚೀನಾಗಿಂತ ಕಡಿಮೆ ಇತ್ತು ಎಂದು ವರದಿಗಳು ಹೇಳುತ್ತವೆ. ಆದ್ರೆ ಈಗ ವರ್ಲ್ಡ್​ ಡೇಟಾ ಲ್ಯಾಬ್ ನೀಡಿರೋ ಮಾಹಿತಿ ಪ್ರಕಾರ ಈ ಎರಡೂ ರಾಷ್ಟ್ರಗಳಲ್ಲಿರೋ ಕಡುಬಡವರ ಒಟ್ಟು ಸಂಖ್ಯೆಗಿಂತಲೂ ನೈಜೀರಿಯಾದಲ್ಲಿ ಹೆಚ್ಚು ಬಡವರಿದ್ದಾರೆ.

ವಿಶ್ವಸಂಸ್ಥೆಯ ಪ್ರಕಾರ ನೈಜೀರಿಯಾದಲ್ಲಿ ದಿನಕ್ಕೆ 130 ರೂಪಾಯಿ(1.90 ಡಾಲರ್​) ನಲ್ಲಿ ಜೀವನ ಮಾಡುವವರಿದ್ದಾರಂತೆ. ನೈಜೀರಿಯಾದಲ್ಲಿ ಪ್ರತಿ ಒಂದು ನಿಮಿಷಕ್ಕೆ 6 ಜನ ಕಡುಬಡತನಕ್ಕೆ ಜಾರುತ್ತಿದ್ದಾರೆ. ಒಪತ್ತು ಊಟಕ್ಕೂ ಕೆಲವರು ಕಷ್ಟಪಡುತ್ತಿದ್ದಾರೆ. ಇಲ್ಲಿನ ಪರಿಸ್ಥಿತಿ ಹೇಗಿದೆ ಅನ್ನೋದು ಇದರಿಂದಲೇ ಗೊತ್ತಾಗುತ್ತೆ. ಹೀಗಿರುವಾಗ ನೈಜಿರಿಯಾದಲ್ಲಿ ಕೆಲವು ಶ್ರೀಮಂತ ವ್ಯಕ್ತಿಗಳು ಲಂಡನ್​​ನಿಂದ ಬ್ರಿಟಿಷ್​ ಏರ್​ವೇಸ್​​ ವಿಮಾನದಲ್ಲಿ ಪಿಜ್ಜಾ ಡೆಲಿವರಿ ಪಡೆಯುತ್ತಿದ್ದಾರೆ ಎಂದು ಇಲ್ಲಿನ ಸಚಿವರೊಬ್ಬರು ಹೇಳಿದ್ದಾರೆ.

ಕೃಷಿ ಸಚಿವ ಔಡು ಓಗ್ಬೇ ಸೆನೇಟ್​​ ಕಮಿಟಿಯಲ್ಲಿ, ಹೇಗೆ ಆಮದುಗಳಿಂದ ಸ್ಥಳೀಯ ರೈತರಿಗೆ ಹಾಗೂ ಉದ್ಯಮಿಗಳಿಗೆ ತೊಂದರೆ ಆಗುತ್ತಿದೆ ಅನ್ನೋ ಬಗ್ಗೆ ಮಾತನಾಡ್ತಿದ್ರು. ಈ ವೇಳೆ ಅವರು, ಈವರೆಗೆ ಜನರು ಅಕ್ಕಿ ಹಾಗೂ ಟೊಮೇಟೋ ಪೇಸ್ಟ್​ ಆಮದು ಮಾಡಿಕೊಳ್ತಿದ್ರು. ಇದರಿಂದ ಇವರು ಬರೀ ಇಂಪೋರ್ಟೆಡ್​​ ಆಹಾರ ತಿನ್ನುತ್ತಾರೆ ಎಂಬ ಸ್ಟೇಟಸ್​​ ಅಥವಾ ಕ್ಲಾಸ್​​ ತೋರಿಸುತ್ತೆ ಎಂದುಕೊಂಡಿದ್ದರು. ಇದಕ್ಕೆ ಬ್ರೇಕ್​ ಹಾಕಬೇಕು. ಅಷ್ಟೇ ಅಲ್ಲ ನೈಜೀರಿಯಾದಲ್ಲಿ ಲಂಡನ್​​ನಿಂದ ಪಿಜ್ಜಾ ಡೆಲಿವರಿ ಪಡೆಯುತ್ತಿರೋ ಕೆಲವು ಶ್ರೀಮಂತ ವ್ಯಕ್ತಿಗಳಿದ್ದಾರೆ ಎಂದು ಓಗ್ಬೇ ಹೇಳಿದ್ದಾರೆ.

ನಿಮಗೆ ಗೊತ್ತಾ ನೈಜೀರಿಯಾದಲ್ಲಿ ಕೆಲವರು ತಮ್ಮ ಸೆಲ್​ಫೋನ್​​ ಬಳಸಿ ಲಂಡನ್​​ನಿಂದ ಪಿಜ್ಜಾ ಇಂಪೋರ್ಟ್​​ ಮಾಡಿಕೊಳ್ಳುತ್ತಿದ್ದಾರೆ. ಲಂಡನ್​​ನಲ್ಲಿ ಪಿಜ್ಜಾ ಖರೀದಿಸುತ್ತಾರೆ. ಅದನ್ನ ಬೆಳಗ್ಗೆ ಬ್ರಿಟೀಷ್​​ ಏರ್​ವೇಸ್​​ ಮೂಲಕ ವಿಮಾನ ನಿಲ್ದಾಣಕ್ಕೆ ತಂದ ನಂತರ ಪಿಕ್​ ಅಪ್​ ಮಾಡುತ್ತಾರೆ ಎಂದು ಓಗ್ಬೇ ತಿಳಿಸಿದ್ದಾರೆ.

ಓಗ್ಬೇ ಹೇಳಿಕೆಯ ವಿಡಿಯೋವನ್ನ ಟ್ವಿಟರ್​​ನಲ್ಲಿ ಹಂಚಿಕೊಂಡ ಬಳಿಕ ಜಗತ್ತಿನಾದ್ಯಂತ ಜನರು ಮಿಶ್ರಪ್ರತಿಕ್ರಿಯೆ ವ್ಯಕ್ತಪಡಿಸುತ್ತಿದ್ದಾರೆ. ಕೆಲವರು ಇದನ್ನ ನಂಬಲು ಸಾಧ್ಯವಾಗುತ್ತಿಲ್ಲ ಎಂದಿದ್ದರೆ, ಇನ್ನೂ ಕೆಲವರು ಇದನ್ನ ತಮಾಷೆಯಾಗಿ ಕಂಡಿದ್ದಾರೆ.

ಇನ್ನು ಓಗ್ಬೇ ಅವರ ಹೇಳಿಕೆಯಲ್ಲಿ ಆಮದಿನಿಂದ ಸ್ಥಳೀಯ ವ್ಯಾಪಾರಿಗಳು ಸಂಕಷ್ಟಕ್ಕೀಡಾಗಿದ್ದಾರೆ ಅನ್ನೋ ಅಂಶವನ್ನು ಬಿಟ್ಟು, ಪಿಜ್ಜಾ ಡೆಲಿವರಿ ಬಗ್ಗೆಯೇ ಗಮನ ಕೊಡಲಾಗ್ತಿದೆ ಎಂದು ಕೆಲವರು ಟೀಕಿಸಿದ್ದಾರೆ.

ಇದನ್ನೂ ಓದಿ: ತಾನು ನಿಜಕ್ಕೂ ಶ್ರೀಮಂತನಾ ಅಂತ ಕನ್ಫರ್ಮ್​​​ ಮಾಡ್ಕೊಳ್ಳೋಕೆ ₹69 ಕೋಟಿ ಡ್ರಾ ಮಾಡಿದ

Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv