ಮೂರೂ ಜಿಲ್ಲಾಧಿಕಾರಿಗಳಿಗೆ ಸಚಿವ ಆರ್​.ವಿ ದೇಶಪಾಂಡೆ ಕ್ಲಾಸ್​..!

ಮೈಸೂರು: ಕಂದಾಯ ಸಚಿವ ಆರ್​.ವಿ. ದೇಶಪಾಂಡೆಯವರು ಜಿಲ್ಲಾಧಿಕಾರಿಗಳಿಗೆ ಕ್ಲಾಸ್ ತೆಗೆದುಕೊಂಡ ಪ್ರಸಂಗ ಮೈಸೂರಿನಲ್ಲಿ ನಡೆಯಿತು. ನಗರದ ಜಿಲ್ಲಾ ಪಂಚಾಯಿತಿ ಕಾರ್ಯಾಲಯದಲ್ಲಿ ಸಚಿವ ಆರ್​.ವಿ ದೇಶಪಾಂಡೆ ಸೇರಿದಂತೆ ಜನಪ್ರತಿನಿಧಿಗಳ ನೇತೃತ್ವದಲ್ಲಿ ಮೂರು ಜಿಲ್ಲೆಯ ಜಿಲ್ಲಾಧಿಕಾರಿಗಳು ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆ ಕರೆಯಲಾಗಿತ್ತು.

ಈ ವೇಳೆ ಮಾತನಾಡಿದ ಸಚಿವ ದೇಶಪಾಂಡೆ, ತುರ್ತು ಪರಿಸ್ಥಿತಿಯಲ್ಲಿ ಜನಸಾಮಾನ್ಯರಿಗೆ ಸ್ಪಂದಿಸಬೇಕು. ಎಮರ್ಜೆನ್ಸಿ ಇದ್ದ ಸಂದರ್ಭದಲ್ಲಿ ಅಧಿಕಾರಿಗಳಿಗೆ ರಜೆ ಹಾಕದೆ, ಕೆಲಸ ಮಾಡಬೇಕು. ಒಂದು ವೇಳೆ ನಿಮಗೆ ಅನಿವಾರ್ಯವಾದ್ರೆ ಬೇರೆ ಜಿಲ್ಲೆ ಕಡೆಯಿಂದ ಸಿಬ್ಬಂದಿ ಕರೆಯಿಸಿಕೊಳ್ಳಿ ಎಂದು ಖಡಕ್​ ಆಗಿ ಹೇಳಿದ್ರು. ಮಳೆಯಿಂದಾಗಿ ಮನೆಗಳು ಸಂಪೂರ್ಣ ಹಾನಿಯಾದ್ರೆ, 48 ಗಂಟೆಯಲ್ಲಿ ಪರಿಹಾರ ನೀಡಬೇಕು. ಅಲ್ಪ ಪ್ರಮಾಣದಲ್ಲಿ ಮನೆಗಳು ಡ್ಯಾಮೇಜ್ ಆಗಿದ್ರೆ, 5 ದಿನಗಳೊಳಗಾಗಿ ಪರಿಹಾರ ಕೊಡಬೇಕು. ಯಾವುದೇ ಸಾರ್ವಜನಿಕರ ಸಮಸ್ಯೆಗಳಿಗೆ ಕೂಡಲೇ ಸ್ಪಂದಿಸಬೇಕು ಅಂತ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ರು. ಮೈಸೂರು ಜಿಲ್ಲಾಧಿಕಾರಿ ಅಭಿರಾಮ್ ಜಿ ಶಂಕರ್, ಮಂಡ್ಯ ಜಿಲ್ಲಾಧಿಕಾರಿ ಮಂಜುಶ್ರೀ, ಚಾಮರಾಜನಗರ ಜಿಲ್ಲಾಧಿಕಾರಿ ಕಾವೇರಿಗೆ ಸೂಚನೆ ಕೊಟ್ಟರು.

ಜನಪ್ರತಿನಿಧಿಗಳಿಂದ ಅಧಿಕಾರಿಗಳಿಗೆ ಪ್ರಶ್ನೆಗಳ ಸುರಿಮಳೆ

ಜಿಲ್ಲೆಯಾದ್ಯಂತ ಮಳೆಯಿಂದಾದ ಹಾನಿ ಅದಕ್ಕೆ ನೀಡಬೇಕಾದ ಪರಿಹಾರದ ಕುರಿತು ಚರ್ಚೆ ನಡೆಸಲಾಯಿತು. ನಂಜನಗೂಡು, ಪಿರಿಯಾಪಟ್ಟಣ ಕಡೆ ಮಳೆ ನೀರಿನಲ್ಲಿ ಮುಳುಗಿದ ಬೆಳೆಗೆ ಪರಿಹಾರದ ಬಗ್ಗೆ ಚರ್ಚಿಸಲಾಯಿತು. ಮಳೆಯಿಂದ ಬೆಳೆ ಕಳೆದುಕೊಂಡ ರೈತರಿಗೆ ಪರಿಹಾರ ನೀಡುವಂತೆ ಖಡಕ್ ಆದೇಶ ನೀಡಲಾಯಿತು. ಕೆರೆಗಳನ್ನ ತುಂಬಿಸಿಕೊಳ್ಳಲು ಏನ್ ಪರಿಹಾರ ಮಾಡಿಕೊಂಡಿದ್ದಿರಾ? ಕೆರೆಗಳಿಗೆ ನೀರು ಬಿಡಲು ಕಾಲಿವೆಗಳು ಸರಿಯಾಗಿವೆ ಅಂತ ಅಧಿಕಾರಿಗಳಿಗೆ ಪ್ರಶ್ನಿಸಿದ್ರು.
ಹತ್ತು ಹಲವು ಸಮಸ್ಯೆಗಳಿಗೆ ಕೋಡ್ ಆಫ್ ಕಂಡೆಕ್ಟ್ ಉತ್ತರ ಕೊಟ್ಟ ನೀರಾವರಿ ಅಧಿಕಾರಿಗಳನ್ನು ಸಚಿವರುಗಳ ಎದುರೇ ಜನಪ್ರತಿನಿಧಿಗಳು ತರಾಟೆಗೆ ತೆಗೆದುಕೊಂಡ್ರು.

ನೀರಾವರಿ, ವಿದ್ಯುತ್ ಇಲಾಖೆಗಳಿಂದ ಯಾವ ರೀತಿ ಪರಿಹಾರ ತರಗೆದುಕೊಂಡಿದ್ದಿರಾ? ಅಂತ ದೇಶಪಾಂಡೆ ಪ್ರಶ್ನೆ ಮಾಡಿದ್ರು. ಎಲ್ಲೆಲ್ಲಿ ಸಮಸ್ಯೆಗಳಿವೆ ಅವುಗಳನ್ನು ತ್ವರಿತಗತಿಯಲ್ಲಿ ಪತ್ತೆ ಹಚ್ಚಿ ಪರಿಹಾರ ಕೊಡಬೇಕು ಅಂತ ಸೂಚಿಸಿದ್ರು. ಮಳೆ ಹಾಗೂ ಪ್ರಕೃತಿ ವಿಕೋಪಕ್ಕೆ ಬಲಿಯಾದ ಜನರು, ಪ್ರಾಣಿಗಳು ಹಾಗೂ ಮನೆ ಕುಸಿತದ ಪ್ರಕರಣಗಳಿಗೆ ತಕ್ಷಣ ಪರಿಹಾರ ನೀಡಬೇಕು ಅಂತ ತಿಳಿಸಿದ್ರು. ಮಳೆಯಿಂದಾಗಿ ಸಾರ್ವಜನಿಕ ಆಸ್ತಿಪಾಸ್ತಿಗಳು ಎಷ್ಟು ನಷ್ಟ ಆಗಿವೆ ಅಂತ ಶಾಸಕರು ಕೇಳಿದ ಪ್ರಶ್ನೆಗಳಿಗೆ ಅಧಿಕಾರಿಗಳು ತಬ್ಬಿಬ್ಬಾದ್ರು.

ಸಭೆಯಲ್ಲಿ ಶಿಕ್ಷಣ ಸಚಿವ ಎನ್. ಮಹೇಶ್ ಸೇರಿ ಶಾಸಕರಾದ ಡಾ.ಯತೀಂದ್ರ, ಅನಿಲ್ ಚಿಕ್ಕಮಾದು, ಶ್ರಿಕಂಠೇಗೌಡ, ಆರ್. ನರೇಂದ್ರ, ವಿಶ್ವನಾಥ್, ಅಪ್ಪಾಜಿಗೌಡ ಭಾಗಿಯಾಗಿದ್ರು. ಮೈಸೂರು, ಮಂಡ್ಯ, ಚಾಮರಾಜನಗರ ಜಿಲ್ಲಾಧಿಕಾರಿಗಳು ಸೇರಿದಂತೆ ಪೊಲೀಸ್, ಅಗ್ನಿ, ವಿದ್ಯುತ್ ಮತ್ತು ನೀರಾವರಿ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ರು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗಾಗಿ ಸಂಪರ್ಕಿಸಿ: contact@firstnews.tv