11 Feb 2019
ಬೆಂಗಳೂರು: ಕಾಂಗ್ರೆಸ್ ಶಾಸಕರಿಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಆಮಿಷವೊಡ್ಡಿದ್ದಾರೆಂದು ಆರೋಪಿಸಿ ಸಿಎಂ ಹೆಚ್ಡಿ ಕುಮಾರಸ್ವಾಮಿ ಮೊನ್ನೆ ಆಡಿಯೋ ಬಿಡುಗಡೆ ಮಾಡಿದ ವಿಚಾರವಾಗಿ ಇಂದು ಸದನದಲ್ಲಿ ಗಂಭೀರ ಚರ್ಚೆ ನಡೆಯುತ್ತಿದೆ. 50 ಕೋಟಿ ಕೊಟ್ಟು ಸ್ಪೀಕರ್ ರಮೇಶ್ ಕುಮಾರ್ರನ್ನೇ ಬುಕ್ ಮಾಡಲಾಗಿದೆ ಎಂಬ ಆರೋಪದ ಸಂಬಂಧ ಸ್ಪೀಕರ್ ಇಂದು ಸ್ಪಷ್ಟೀಕರಣ ನೀಡಿದ್ರು.
ಈ ವೇಳೆ ಅವರು ಭಾವುಕರಾಗಿ ಮಾತನಾಡಿದ್ರು. ರಮೇಶ್ ಕುಮಾರ್ ಅವರ ನಡೆ ಬಗ್ಗೆ ಸಚಿವ ಕೃಷ್ಣ ಭೈರೇಗೌಡ, ಡಿಕೆ ಶಿವಕುಮಾರ್, ಮಾಜಿ ಸಿಎಂ ಸಿದ್ದರಾಮಯ್ಯ ಸೇರಿದಂತೆ ಅನೇಕರು ಸದನದಲ್ಲಿ ಗಾಢ ಚರ್ಚೆ ನಡೆಸುತ್ತಿರುವ ವೇಳೆ ಲೋಕೋಪಯೋಗಿ ಸಚಿವ ಹೆಚ್.ಡಿ ರೇವಣ್ಣ ಗಡದ್ದಾಗಿ ನಿದ್ರೆ ಮಾಡುತ್ತಿದ್ದರು. ಇದರ ಬೆನ್ನಲ್ಲೇ ಕಲಾಪ ಮುಂದೂಡಿಕೆಯಾಯಿತು.
Follow us on:
YouTube: firstNewsKannada Instagram: firstnews.tv Face Book: firstnews.tv Twitter: firstnews.tv