ಸದನದಲ್ಲಿ ಆಡಿಯೋ ಬಗ್ಗೆ ಗಂಭೀರ ಚರ್ಚೆ, ರೇವಣ್ಣ ಗಡದ್​​ ನಿದ್ದೆ

ಬೆಂಗಳೂರು: ಕಾಂಗ್ರೆಸ್​​ ಶಾಸಕರಿಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್​ ಯಡಿಯೂರಪ್ಪ ಆಮಿಷವೊಡ್ಡಿದ್ದಾರೆಂದು ಆರೋಪಿಸಿ ಸಿಎಂ ಹೆಚ್​ಡಿ ಕುಮಾರಸ್ವಾಮಿ ಮೊನ್ನೆ ಆಡಿಯೋ ಬಿಡುಗಡೆ ಮಾಡಿದ ವಿಚಾರವಾಗಿ ಇಂದು ಸದನದಲ್ಲಿ ಗಂಭೀರ ಚರ್ಚೆ ನಡೆಯುತ್ತಿದೆ. 50 ಕೋಟಿ ಕೊಟ್ಟು ಸ್ಪೀಕರ್​ ರಮೇಶ್​ ಕುಮಾರ್​ರನ್ನೇ ಬುಕ್​ ಮಾಡಲಾಗಿದೆ ಎಂಬ ಆರೋಪದ ಸಂಬಂಧ ಸ್ಪೀಕರ್​ ಇಂದು ಸ್ಪಷ್ಟೀಕರಣ ನೀಡಿದ್ರು.

ಈ ವೇಳೆ ಅವರು ಭಾವುಕರಾಗಿ ಮಾತನಾಡಿದ್ರು. ರಮೇಶ್​ ಕುಮಾರ್​ ಅವರ ನಡೆ ಬಗ್ಗೆ ಸಚಿವ ಕೃಷ್ಣ ಭೈರೇಗೌಡ, ಡಿಕೆ ಶಿವಕುಮಾರ್​, ಮಾಜಿ ಸಿಎಂ ಸಿದ್ದರಾಮಯ್ಯ ಸೇರಿದಂತೆ ಅನೇಕರು ಸದನದಲ್ಲಿ ಗಾಢ ಚರ್ಚೆ ನಡೆಸುತ್ತಿರುವ ವೇಳೆ ಲೋಕೋಪಯೋಗಿ ಸಚಿವ ಹೆಚ್​.ಡಿ ರೇವಣ್ಣ ಗಡದ್ದಾಗಿ ನಿದ್ರೆ ಮಾಡುತ್ತಿದ್ದರು. ಇದರ ಬೆನ್ನಲ್ಲೇ ಕಲಾಪ ಮುಂದೂಡಿಕೆಯಾಯಿತು.


Follow us on:

YouTube: firstNewsKannada  Instagram: firstnews.tv  Face Book: firstnews.tv  Twitter: firstnews.tv