ರೇವಣಸಿದ್ದೇಶ್ವರ ಮೂರ್ತಿಯ ಪುನರ್​ ಪ್ರತಿಷ್ಠಾಪನೆಗೆ ಭಕ್ತರ ಪಟ್ಟು.!

ಕಲಬುರಗಿ:  ಕಲಬುರಗಿ ಜಿಲ್ಲೆಯ ಕಾಳಗಿ ತಾಲೂಕಿನ‌ ರೇವಗ್ಗಿ‌ ಗುಡ್ಡದಲ್ಲಿರುವ 54 ಅಡಿ ಎತ್ತರದ ರೇವಣಸಿದ್ದೇಶ್ವರ ಮೂರ್ತಿ ಬಿರುಗಾಳಿಯಿಂದಾಗಿ‌ ಧರೆಗುರುಳಿದಿದೆ. ಆದರೆ 4 ದಿನ ಕಳೆದರೂ ಮೂರ್ತಿಯ ಮರುಸ್ಥಾಪನೆಯ ಕಾರ್ಯ ಶುರುವಾಗಿಲ್ಲ. ಈ ಹಿನ್ನೆಲೆಯಲ್ಲಿ ಸ್ಥಳಕ್ಕೆ ಭೇಟಿ‌‌‌‌ ನೀಡಿದ ಅಧಿಕಾರಿಗಳ ವಿರುದ್ಧ ಭಕ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಫೈಬರ್​ನಿಂದ ನಿರ್ಮಿಸಲಾಗಿದ್ದ ರೇವಣಸಿದ್ದೇಶ್ವರ ಮೂರ್ತಿ ಇದಾಗಿದ್ದು, ದೇವಸ್ಥಾನಕ್ಕೆ ಬಂದಿರುವ ದೇಣಿಗೆ ಹಣದಿಂದ ಪಂಚಲೋಹದ‌ ಮೂರ್ತಿಯನ್ನು ಮಾಡಿಸಿ ತಕ್ಷಣವೇ ಮೂರ್ತಿಯನ್ನು ಪ್ರತಿಷ್ಠಾಪಿಸುವಂತೆ ಭಕ್ತರು ಒತ್ತಾಯಿಸಿದ್ದಾರೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv