ವಿಮಾನವನ್ನೇ ಮನೆಯಾಗಿಸಿಕೊಂಡ ನಿವೃತ್ತ ಎಂಜಿನಿಯರ್​​..! ನೆರೆಹೊರೆ ಯಾರು..!?

ದೊಡ್ಡ ವಿಮಾನವನ್ನೇ ಮನೆಯಾಗಿಸಿಕೊಂಡರೆ ಹೇಗೆ..!? ಆ ಕಲ್ಪನೆಯೇ ಒಂದು ಅದ್ಭುತ, ಆದ್ರೆ ಅದು ದುಬಾರಿಯೂ ಹೌದು. ಇದಕ್ಕೆ ದೊಡ್ಡ ಮಟ್ಟದ ಆಲೋಚನೆ ಬೇಕಾಗುತ್ತದೆ. ಇಂತಹ ಹೈ ಲೆವೆಲ್​ ಆಫ್​ ಥಿಂಕಿಂಗ್​​​ ಸಾಕಾರಗೊಳಿಸಿದ್ದಾರೆ ಅಮೆರಿಕಾದ ಒರೆಗಾನ್ ಪ್ರಾಂತ್ಯದ ನಿವೃತ್ತ ಎಲೆಕ್ಟ್ರಿಕಲ್​ ಎಂಜಿನಿಯರ್​​ ಬ್ರೂಸ್​​ ಕ್ಯಾಂಬೆಲ್. ​​ಬ್ರೂಸ್​​ ಕ್ಯಾಂಬೆಲ್ ಅವರದ್ದು ಮೊದಲೇ ಎಂಜಿನಿಯರ್​​ ಬುದ್ಧಿ. ಅದರೊಂದಿಗೆ ವಿಭಿನ್ನ ಯೋಚನಾಲಹರಿ. ಹಾಗಾಗಿಯೇ ಅವರು ಹಳೆಯ ವಿಮಾನವೊಂದನ್ನು ಖರೀದಿಸಿ, ತಮ್ಮ ಮನೆಯನ್ನಾಗಿಸಿಕೊಂಡಿದ್ದಾರೆ.

ಆ ವಿಮಾನ ಇನ್ನೇನು ಗುಜರಿ ಸೇರಬೇಕಿತ್ತು. ಆಗ ಅದರ ಮೇಲೆ ಕಣ್ಣು ಹಾಕಿದ ಕ್ಯಾಂಬೆಲ್, ಅದನ್ನು ಖರೀದಿಸಿ ಮನೆಯನ್ನಾಗಿಸುವ ಕಾರ್ಯಕ್ಕೆ ಕೈಹಾಕಿಯೇಬಿಟ್ಟರು. ಅದಕ್ಕೆಂದೇ ವಿಶಾಲ ಜಾಗ ಖರೀದಿಸಿ, ತಮ್ಮ ಟೇಸ್ಟ್​ಗೆ ತಕ್ಕಂತೆ ವಿಮಾನ ಮನೆ ನಿರ್ಮಿಸಿಕೊಂಡರು. ಇನ್ನು ಇಂತಹ ದುಬಾರಿ ಮನೆಗೆ ನೆರೆಹೊರೆ ಇರುವ ಮಾತಾದರೂ ಎಲ್ಲಿಯದ್ದು. ಹಾಗಾಗಿ ಇವರದು ಏಕಾಂಗಿ ಮನೆ!

ಕ್ಯಾಂಬೆಲ್, 1990ರಲ್ಲಿಯೇ ಗ್ರೀಸ್​ ದೇಶದ ಹಳೆಯ ವಿಮಾನವೊಂದನ್ನ ಖರೀದಿಸಿದ್ದರು. ನಂತರ ಹಲವು ವರ್ಷಗಳ ಕಾಲ ಅವರು ವಿಮಾನದ ವಿವಿಧ ಆಯಾಮಗಳನ್ನು ಪರೀಕ್ಷಿಸುತ್ತಾ,​ ಪರಿಗಣಿಸುತ್ತಾ ತಮ್ಮ ಇಷ್ಟದಂತೆ ವಿಮಾನ ಮನೆ ನಿರ್ಮಿಸಿಕೊಂಡು ವಾಸಿಸುತ್ತಿದ್ದಾರೆ. ಮುಂದೆ ಅವರು ಜಪಾನಿನಲ್ಲಿ ಇದೇ ರೀತಿ ವಿಮಾನವೊಂದನ್ನ ಮನೆಯಾಗಿ ಪರಿವರ್ತಿಸಬೇಕು ಅಂತಾನೂ ಪ್ಲಾನ್​ ಹಾಕಿದ್ದಾರೆ.

ಬನ್ನಿ ನಾವೂ ಒಂದು ರೌಂಡ್ ​ಕ್ಯಾಂಬೆಲ್ ವಿಮಾನ ಮನೆಯಲ್ಲಿ ಸುತ್ತಾಡಿ ಬರೋಣ..

 


Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv