ನಾವವರಲ್ಲ..ನಾವವರಲ್ಲ ಅಂದ್ರು ಸೇನಾಧಿಕಾರಿಗಳು..!

ನವದೆಹಲಿ: ಭಾರತೀಯ ಸೇನೆಯನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳಾಗುತ್ತಿದೆ ಅಂತ ಇಬ್ಬರು ನಿವೃತ್ತ ಸೇನಾಧಿಕಾರಿಗಳು ರಾಷ್ಟ್ರಪತಿಗಳಿಗೆ ಬರೆದಿದ್ದಾರೆ ಎನ್ನಲಾದ ಪತ್ರ ಸೋಷಿಯಲ್ ಮಿಡಿಯಾಗಳಲ್ಲಿ ವೈರಲ್ ಆಗಿತ್ತು. ಸದ್ಯ ಈ ಬಗ್ಗೆ ಸ್ಪಷ್ಟನೆ ನೀಡಿರುವ ನಿವೃತ್ತ ಸೇನಾಧಿಕಾರಿಗಳು, ಇದೊಂದು ಫೇಕ್ ನ್ಯೂಸ್ ಅಂತ ಹೇಳಿದ್ದಾರೆ.

ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಜನರಲ್ ಎಸ್.ಎಫ್​. ರೋಡ್ರಿಗಸ್,​ ನಾನು ಜೀವನವೀಡಿ ರಾಜಕೀಯ ರಹಿತ ನಿಲುವಿನಲ್ಲಿ ಬದುಕಿದ್ದೇನೆ. ರಾಷ್ಟ್ರ ಮೊದಲು ಅನ್ನೋ ಸಿದ್ಧಾಂತದಡಿ ಬದುಕಿದ್ದೇನೆ. ಈ ರೀತಿಯ ಪತ್ರ ಹೇಗೆ ಹರಿದಾಡಿತು ಅನ್ನೋದು ನನಗೆ ಗೊತ್ತಿಲ್ಲ ಅಂತ ಹೇಳಿದ್ದಾರೆ. ಇನ್ನು, ವಾಯುಸೇನೆಯ ಮಾಜಿ ಮುಖ್ಯಸ್ಥ ಎನ್.ಸಿ ಸೂರಿ ಇ-ಮೇಲ್ ಹಾಗೂ ವಾಟ್ಸಾಪ್​ಗಳಲ್ಲಿ ಪತ್ರವೊಂದು ಹರಿದಾಡುತ್ತಿದೆ ಎನ್ನಲಾಗಿದೆ. ಇದ್ಯಾವುದು ನನ್ನ ಗಮನಕ್ಕೆ ಬಂದಿಲ್ಲ. ನಮ್ಮ ಹೆಸರನ್ನ ದುರುಪಯೋಗಪಡಿಸುತ್ತಿದ್ದಾರೆ ಅಂತ ಹೇಳಿದ್ದಾರೆ.