ಗುಹೆಯಲ್ಲಿದ್ದ ಬಾಲಕರ ರಕ್ಷಣೆಗೆ ಭಾರತ ಸಹಕಾರಿಯಾಗಿದ್ದು ಹೇಗೆ…?

ಪುಣೆ : ಥೈಲ್ಯಾಂಡ್‌ನ ಥಾಮ್​​ ಲುವಾಂಗ್​ ಗುಹೆಯಲ್ಲಿ ಸಿಲುಕಿದ್ದ ವೈಲ್ಡ್​​​​ ಬೋರ್​​​​ ಫುಟ್​ಬಾಲ್​​ ತಂಡದ 12 ಬಾಲಕರು, ಒಬ್ಬ ಕೋಚ್​​​ ಸೇರಿ ಒಟ್ಟು 13 ಜನರ ರಕ್ಷಣಾ ಕಾರ್ಯಾಚರಣೆಗೆ ಇಡೀ ವಿಶ್ವವೇ ಪ್ರಶಂಸೆ ವ್ಯಕ್ತಪಡಿಸಿದೆ. ಆದ್ರೆ ಈ ಕಾರ್ಯಾಚರಣೆಯಲ್ಲಿ ಭಾರತೀಯರ ಪರಿಶ್ರಮವೂ ಸೇರಿದೆ ಅನ್ನೋದು ವಿಶೇಷ. ಗುಹೆಯಲ್ಲಿ ಸಿಲುಕಿದ್ದವರ ರಕ್ಷಣೆಗೆ ಪುಣೆಯ ಕಿರ್ಲೋಸ್ಕರ್​​​ ಬ್ರದರ್ಸ್​​​ ಲಿಮಿಟೆಡ್​​​​​​​​​​​(ಕೆಬಿಎಲ್​​) ಸಂಸ್ಥೆಯ ತಜ್ಞರಿಂದ ತಾಂತ್ರಿಕ ಸಲಹೆ ಪಡೆಯಲು ಭಾರತೀಯ ರಾಯಭಾರಿ ಸಂಸ್ಥೆ ಥೈಲ್ಯಾಂಡ್‌​​ ಅಧಿಕಾರಿಗಳಿಗೆ ಶಿಫಾರಸು ಮಾಡಿತ್ತು.

ಗುಹೆಯ ಒಳಗೆ ನುಗ್ಗಿದ್ದ ನೀರನ್ನು ಪಂಪಿಂಗ್​​​ ಮಾಡಿ ಹೊರಬಿಡಲು ಸೂಕ್ತ ತಾಂತ್ರಿಕ ಸಲಹೆ ನೀಡಲೆಂದು ಕೆಬಿಎಲ್ ತನ್ನ​​​ ತಜ್ಞರ ತಂಡವೊಂದನ್ನು ಅಲ್ಲಿಗೆ ಕಳುಹಿಸಿತ್ತು. ಜುಲೈ 5ರಿಂದ ಅಲ್ಲಿನ ಸೇನೆಯ ನೆರವಿಗೆ ಧಾವಿಸಿದ್ದ ಈ ತಂಡ ರಕ್ಷಣಾ ಕಾರ್ಯಾಚರಣೆಯಲ್ಲಿ ಕೈಜೋಡಿಸಿತ್ತು. ಅಲ್ಲದೆ, ನೀರು ಹೊರತೆಗೆಯುವ ಉತ್ತಮ ಸಾಮರ್ಥ್ಯವುಳ್ಳ ನಾಲ್ಕು ಆಟೋ ಪ್ರೈಮ್ ಡಿವಾಟರಿಂಗ್‌ ಪಂಪ್‌ಗಳನ್ನು ಒದಗಿಸಿತ್ತು. ಆ ಮೂಲಕ ಇದೀಗ ಇಡೀ ವಿಶ್ವದ ಶ್ಲಾಂಘನೆಗೆ ಈ ತಂಡವೂ ಪಾತ್ರವಾಗಿದೆ.