ಸಮ್ಮಿಶ್ರ ಸರ್ಕಾರ ತನ್ನಷ್ಟಕ್ಕೆ ತಾನೇ ಪತನವಾಗಲಿದೆ- ಶಾಸಕ ಎಂ.ಪಿ.ರೇಣುಕಾಚಾರ್ಯ

ದಾವಣಗೆರೆ: ರಾಜ್ಯ ಸಮ್ಮಿಶ್ರ ಸರ್ಕಾರ ತನ್ನಷ್ಟಕ್ಕೆ ತಾನೇ ಪತನವಾಗಲಿದೆ ಎಂದು ಹೊನ್ನಾಳಿ ಶಾಸಕ ಎಂ.ಪಿ.ರೇಣುಕಾಚಾರ್ಯ ಭವಿಷ್ಯ ನುಡಿದಿದ್ದಾರೆ.
ದಾವಣಗೆರೆಯಲ್ಲಿ ಪ್ರತಿಕ್ರಿಯಿಸಿರುವ ಅವರು, ಈ ಹಿಂದೆ ಕುಮಾರಸ್ವಾಮಿಯವರು ಯಡಿಯೂರಪ್ಪ ಅವರಿಗೆ ಸಿಎಂ ಪಟ್ಟ ಬಿಟ್ಟು ಕೊಡದೆ ವಚನ ಭ್ರಷ್ಟರಾಗಿದ್ದರು. ಈಗ ಸಾಲಮನ್ನಾ ಮಾಡ್ತೀವಿ ಎಂದು ವಚನ ಭ್ರಷ್ಟರಾಗಿದ್ದಾರೆ. ಈಗ ರೈತರಿಗೆ ಆಸೆ ತೋರಿಸಿ ಕೊಟ್ಟ ಮಾತು ತಪ್ಪಿದ್ದು, ಭರವಸೆ ನೀಡಿದ್ದನ್ನು ಈ ಕೂಡಲೇ ಈಡೇರಿಸಬೇಕು . ಇಲ್ಲದಿದ್ದರೆ, ನಾಳೆ ಜಿಲ್ಲೆಯನ್ನು ಸಂಪೂರ್ಣ ಬಂದ್ ಮಾಡಲಾಗುವುದು ಎಂದು ಶಾಸಕ ಎಂಪಿ ರೇಣುಕಾಚಾರ್ಯ ಎಚ್ಚರಿಸಿದ್ದಾರೆ.