‘ಗುತ್ತಿಗೆದಾರರು ಲೂಟಿ ಹೊಡೆದ ಹಣದಿಂದ ಚುನಾವಣೆ ನಡೆಸಲಾಗಿದೆ’

ತುಮಕೂರು: ಮಾಜಿ ಸಚಿವ ರೇಣುಕಾಚಾರ್ಯ ತುಮಕೂರು ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿ ಶಿವಕುಮಾರ್​​ ಮಹಾಸ್ವಾಮಿಗಳ ಆಶೀರ್ವಾದ ಪಡೆದರು.

ನಂತರ ಮಾತನಾಡಿದ ಅವರು, ಆರ್​​ಅರ್​​ ನಗರದ ಚುನಾವಣೆಯನ್ನು ಕಾಂಗ್ರೆಸ್​​​ ಹಣದ ಬಲದಿಂದ ಗೆದ್ದಿದೆ, ಪಿ.ಡಬ್ಲೂ.ಡಿ ಗುತ್ತಿಗೆದಾರರು ಲೂಟಿ ಹೊಡೆದ ಹಣದಿಂದ ಚುನಾವಣೆ ನಡೆಸಲಾಗಿದೆ ಅಂತ ಅರೋಪಿಸಿದ್ದಾರೆ. ಇನ್ನು ಸಿಎಂ ಕುಮಾರಸ್ವಾಮಿ ಅವರ ನಾನು ಜನರ ಮುಲಾಜಿನಲ್ಲಿಲ್ಲ ಎಂಬ ಹೇಳಿಕೆಗೆ ತಿರುಗೇಟು ನೀಡಿದ ರೇಣುಕಾಚಾರ್ಯ, ಕುಮಾರಸ್ವಾಮಿಗೆ ಜನರು ಮುಖ್ಯಾನೋ ಅಥವಾ ಪಕ್ಷ ಮುಖ್ಯಾನೋ ಅನ್ನೊದು ಸ್ಪಷ್ಟಪಡಿಸಲಿ ಎಂದಿದ್ದಾರೆ. ದೇವೇಗೌಡರಿಂದ ಸ್ವಜಾತಿಯ ಮುಖಂಡರೇ ನೋವು ಅನುಭವಿಸಿದ್ದಾರೆ. ಸರ್ಕಾರ ರಚನೆಗೂ ಮುನ್ನ ರೆಸಾರ್ಟ್​ನಲ್ಲಿ ಒಬ್ಬೊಬ್ಬ ಶಾಸಕನಿಗೆ ಮೂವರು ಬೌನ್ಸ್​​ರ್​​ಗಳನ್ನು ನೇಮಕ ಮಾಡಿದ್ದರು. ಅಲ್ಲದೇ ಹೊರಗಡೆ ಹೋದ್ರೆ ಹೊಡಿತೀವಿ ಅಂತಾ ಬೆದರಿಸಿ ಶಾಸಕರನ್ನು ಬಂಧನದಲ್ಲಿಟ್ಟಿದ್ದರು ಎಂದು ದೇವೇಗೌಡರ ವಿರುದ್ಧ ಕಿಡಿಕಾರಿದ್ದಾರೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಕ್ಕಾಗಿ ಸಂಪರ್ಕಿಸಿ: contact@firstnews.tv