ಮೆಲ್ಬೋರ್ನ್ ರೆನಿಗೇಡ್ಸ್​ ಬಿಗ್​ಬ್ಯಾಶ್ ಚಾಂಪಿಯನ್ಸ್..!

ಕ್ರಿಕೆಟ್ ಆಸ್ಟ್ರೇಲಿಯಾ ಲೀಗ್ ಬಿಗ್​ಬ್ಯಾಶ್ 2019ರ ಚಾಂಪಿಯನ್ಸ್ ಆಗಿ ಮೆಲ್ಬೋರ್ನ್ ರೆನಿಗೇಡ್ಸ್​ ಹೊರಹೊಮ್ಮಿದೆ. ಫೈನಲ್ ಪಂದ್ಯದಲ್ಲಿ ಮೆಲ್ಬೋರ್ನ್ ಸ್ಟಾರ್ಸ್ ವಿರುದ್ಧ 13 ರನ್​ಗಳ ಜಯ ಸಾಧಿಸಿತು. ಈ ಮೂಲಕ ಮೊದಲ ಬಾರಿ ಬಿಗ್​ಬ್ಯಾಶ್ ಟ್ರೋಫಿಗೆ ಮುತ್ತಿಕ್ಕಿತು.  ಟಾಸ್​ ಸೋತ್ರು, ಮೊದಲು ಬ್ಯಾಟಿಂಗ್ ಮಾಡಿದ ರೆನಿಗೇಡ್ಸ್​ 20 ಓವರ್​​ಗಳಲ್ಲಿ 5 ವಿಕೆಟ್​ ನಷ್ಟಕ್ಕೆ 145 ರನ್​ ಕಲೆಹಾಕಿತು. ಈ ಗುರಿ ಬೆನ್ನತ್ತಿದ ಸ್ಟಾರ್ಸ್​ಗೆ 20 ಓವರ್​ಗಳಲ್ಲಿ 7 ವಿಕೆಟ್​ಗೆ 132 ರನ್ ಮಾತ್ರ ಗಳಿಸಲು ಸಾಧ್ಯವಾಯ್ತು. ರೆನಿಗೇಡ್ಸ್ ಪರ ಬ್ಯಾಟಿಂಗ್​ನಲ್ಲಿ ಅಜೇಯ 38 ರನ್​ ಹಾಗು ಬೌಲಿಂಗ್​ನಲ್ಲಿ ಎರಡು ವಿಕೆಟ್​ ಪಡೆದ ಡೇನಿಯಲ್ ಕ್ರಿಸ್ಟಿಯನ್, ಪಂದ್ಯ ಶ್ರೇಷ್ಠ ಪ್ರಶಸ್ತಿ ಮುಡಿಗೇರಿಸಿಕೊಂಡ್ರು.