ಐದನೇ ಆನೆಗೆ ರೇಡಿಯೋ ಕಾಲರ್ ಅಳವಡಿಕೆ

ಕೊಡಗು: ಜಿಲ್ಲೆಯಲ್ಲಿ ಕಾಡಾನೆಗಳು ಸಂಖ್ಯೆ ಹೆಚ್ಚಳದ ಜೊತೆಗೆ ಉಪಟಳವೂ ಹೆಚ್ಚುತ್ತಿರುವ ಬೆನ್ನಲ್ಲೇ ಅರಣ್ಯ ಇಲಾಖೆಯಿಂದ ರೇಡಿಯೋ ಕಾಲರ್ ಅಳವಡಿಕೆ ಕಾರ್ಯ ಮುಂದುವರೆದಿದೆ.
ವಿರಾಜಪೇಟೆ ತಾಲೂಕು ಸಿದ್ದಾಪುರ-ಪಾಲಿಬೆಟ್ಟ ನಡುವಿನ ಆಲಿತೋಪ್ ಎಸ್ಟೆಟ್‍ನಲ್ಲಿ ಕಾಡಾನೆಯೊಂದಕ್ಕೆ ರೇಡಿಯೋ ಕಾಲರ್ ಅಳವಡಿಸಲಾಗಿದೆ. ಕಾಡಾನೆ ಹಿಂಡಿನ ಮುಖ್ಯ ಆನೆಯನ್ನು ಗುರುತಿಸಿ ಕಾಲರ್ ಅಳವಡಿಸಿ, ನಂತರ ಅವುಗಳ ಚಲನ ವಲನವನ್ನು ಮೊಬೈಲ್ ಮೂಲಕ ಪತ್ತೆ ಮಾಡುವುದು ರೇಡಿಯೋ ಕಾಲರ್ ಅಳವಡಿಕೆ ಹಿಂದಿನ ಉದ್ದೇಶವಾಗಿದೆ.
ಅಂದಾಜು 30 ವರ್ಷ ಪ್ರಾಯದ ವಯಸ್ಸಿನ ಹೆಣ್ಣಾನೆಗೆ ರೇಡಿಯೋ ಕಾಲರ್ ಅಳವಡಿಸಲಾಗಿದ್ದು, ಡಿಸಿಎಫ್ ಮರಿಯಾ ಕ್ರಿಸ್ತರಾಜು, ಎಸಿಎಫ್ ರೋಷಿಣಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಯಿತು. ಮತ್ತಿಗೋಡು ಶಿಬಿರದ ಆನೆಗಳಾದ ಅಭಿಮನ್ಯು, ಕೃಷ್ಣ ಕೂಡ ಪಾಲ್ಗೊಂಡಿತ್ತು. ರೇಡಿಯೋ ಕಾಲರ್ ಅಳವಡಿಕೆಯಾದ ಕಾಡಾನೆಗೆ ಇಸ್ರ ಎಂದು ಹೆಸರಿಡಲಾಗಿದೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗಾಗಿ ಸಂಪರ್ಕಿಸಿ: contact@firstnews.tv