74 ಗಂಟೆಗಳ ಕಾಲ ಜೀವ ಬಿಗಿ ಹಿಡಿದು ಬದುಕಿ ಬಂದ ಗಟ್ಟಿಗಿತ್ತಿ ಹೊನ್ನಮ್ಮ..

ಧಾರವಾಡ: ಕಟ್ಟಡ ದುರಂತದಲ್ಲಿ ಅದೆಷ್ಟೋ ಜೀವಗಳು  ಬಲಿಯಾದವು. 74 ಗಂಟೆಗಳ ಕಾಲ ಜೀವ ಬಿಗಿ ಹಿಡಿದು ಹೊನ್ನಮ್ಮ ಬದುಕಿ ಬಂದದ್ದು. ಪವಾಡವೇ ಸರಿ. ಹೊನ್ನಮ್ಮ ಮಾರುತಿ‌ ಪತ್ತಾರ ವಿಜಯಪುರ ಜಿಲ್ಲೆಯ ಮುದ್ದೆಬಿಹಾಳ‌ ಮೂಲದವರು. ಹೊನ್ನಮ್ಮನ ಪತಿ‌ ತೀರಿಕೊಂಡಿದ್ದಾರೆ. ಪತಿ ನಿಧನದ ನಂತರ ನಾಲ್ಕು ಮಕ್ಕಳಿರುವ ಸಂಸಾರದ ನೋಗವನ್ನು ಹೊನ್ನಮ್ಮ ಹೊರುತ್ತಾರೆ. ಧಾರವಾಡಕ್ಕೆ ಬಂದ ಹೊನ್ನಮ್ಮ ಕಟ್ಟಡ ಕಾರ್ಮಿಕಳಾಗಿ ಕೆಲಸ ಮಾಡುತ್ತಿದ್ರು. ಮಾ. 19 ರಂದು ನಡೆದ ದುರ್ಘಟನೆಯಲ್ಲಿ ಅವರೂ ಸಿಲುಕಿಕೊಂಡಿದ್ರು. 74 ತಾಸುಗಳ ಕಾರ್ಯಾಚರಣೆ ಬಳಿಕ ಹೊನ್ನಮ್ಮ ಜೀವಂತವಾಗಿ ಹೊರ ಬಂದಿದ್ದಾರೆ. ಸದ್ಯ ಕಿಮ್ಸ್​ನಲ್ಲಿ ಚಿಕಿತ್ಸೆ ‌ಪಡೆಯುತ್ತಿದ್ದಾರೆ. ಘಟನೆಯಿಂದಾಗಿ ಅವರಿಗೆ ತೀವ್ರ ಗಾಯಗಳಾಗಿವೆ. ಕೈಕಾಲು ಆಡಿಸದ ಸ್ಥಿತಿಯಲ್ಲಿ‌ ಅವರು ಮಲಗಿದ್ದಾರೆ. ಕಾಲುಗಳು ಜಜ್ಜಿ ಹೋಗಿದ್ದು, ಹೆಚ್ಚು ಮಾತನಾಡದ ಸ್ಥಿತಿಯಲ್ಲಿಲ್ಲ.

‘ದೇವರು ದೊಡ್ಡವನು’
ಕಟ್ಟಡ ಕುಸಿದಾಗ ಹೊನ್ನಮ್ಮ 3ನೇ ಮಹಡಿಯಲ್ಲಿ ಕೆಲಸ ಮಾಡುತ್ತಿದ್ದರು. ಹೊನ್ನಮ್ಮಳಿಗೆ ಪಾತಾಳಕ್ಕೆ ಬಿದ್ದ ಅನುಭವಾಗಿತ್ತು. ಬಿದ್ದ ರಭಸದಲ್ಲಿ ತಲೆಗೆ ಅವಶೇಷಗಳು ಬಿದ್ದ ‌ಪರಿಣಾಮ‌ ಪ್ರಜ್ಞೆ ತಪ್ಪಿತ್ತು. ಎಚ್ಚರವಾದಾಗ ದೇಹದ‌ ಮೇಲೆ ಇಟ್ಟಿಗೆ, ಸಿಮೆಂಟ್, ಧೂಳು , ತುಂಡುಗಳು ಬಿದಿದ್ದವು‌. ಬಾಯಿಯೊಳಗೆ ಧೂಳು ಸೇರಿದ್ದರಿಂದ ಉಸಿರಾಡಲು ಕಷ್ಟವಾಯಿತು ಎಂದು ಹೊನ್ನಮ್ಮ ಹೇಳಿದ್ದಾರೆ. ನಾನಿಲ್ಲೇ ಮಣ್ಣಾದ್ರೆ ಮಕ್ಕಳ ಗತಿ ಏನು ಎಂದು ಕೂಗಿಕೊಳ್ಳುತ್ತಿದೆ. ಆದ್ರೆ ಯಾರಿಗೂ ಕೇಳಲಿಲ್ಲ.‌ ತೀವ್ರ ಬಾಯಾರಿಕೆ, ತಡೆಯಲಾಗದ ನೋವು, ಮಕ್ಕಳ‌ ಕನವರಿಕೆ, ಕಗ್ಗತ್ತಲ‌ಲ್ಲಿ‌ ಒರಗಿದ ಭಂಗಿಯಲ್ಲಿ ದಿನ ದೂಡಿದೆ. ಶುಕ್ರವಾರ ಸಂಜೆ ಜನರ ಶಬ್ದ ಹಾಗೂ ವಾಹನ ಶಬ್ದ ಜೋರಾಗಿ‌ ಕೇಳಿಸಿತ್ತು. ಕಾಪಾಡಿ‌ ಕಾಪಾಡಿ ಎಂದು ಕೂಗಿಕೊಂಡೆ.‌ ಆಗ ರಕ್ಷಣಾ ಸಿಬ್ಬಂದಿ ಮಣ್ಣಾಗುತ್ತಿದ್ದವಳನ್ನು ಬದುಕಿಸಿದರು. ದೇವರು ದೊಡ್ಡವನು – ಹೊನ್ನಮ್ಮ, ಸಾವನ್ನ ಗೆದ್ದುಬಂದ ಗಟ್ಟಿಗಿತ್ತಿ


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv