ಅತಿಯಾದ ಹೇರ್​ ಲಾಸ್​ಗೆ ಕಾರಣ ಏನ್​ ಗೊತ್ತಾ?

ನಮ್ಮ ಲುಕ್​ ಮತ್ತಷ್ಟು ಚೆನ್ನಾಗಿ ಕಾಣಲು ಕೇಶರಾಶಿ ಕೂಡ ಕಾರಣ. ಸಣ್ಣ ಮಕ್ಕಳಿಂದ ಹಿಡಿದು ವಯೋವೃದ್ಧರ ತನಕ ಹೇರ್​ ಸ್ಟೈಲ್​ ಬಗ್ಗೆ ಪ್ರತಿಯೊಬ್ಬರು ತಲೆಕೆಡಿಸಿಕೊಳ್ಳುತ್ತಾರೆ. ಫಾರ್ಮಲ್​ ಫಂಕ್ಷನ್​, ಪಾರ್ಟಿ, ಮದುವೆ ಸಮಾರಂಭ ಹೀಗೆ ಪ್ರತಿಯೊಂದು ಈವೆಂಟ್​ಗೆ ಹೋಗೋವಾಗ್ಲು ಕೂಡ ಡಿಫರೆಂಟ್​ ವೆರೈಟಿ ಆಫ್​ ಹೇರ್​ ಸ್ಟೈಲ್​ ಅಂತ ಮೊರೆ ಹೋಗ್ತಾರೆ. ಹುಡುಗರೇನು ಇದಕ್ಕೆ ಹೊರತಾಗಿಲ್ಲ. ಹೀಗಿರುವ ಈಗಿನ ಜನರೆಷನ್​ ಫೇಸ್​ ಮಾಡ್ತಾ ಇರೋ ಮೇಜರ್​ ಪ್ರಾಬ್ಲಂ ಅಂದ್ರೆ ಹೇರ್​ ಲಾಸ್​. ಸಾಮಾನ್ಯವಾಗಿ ಕೆಲ ಗಂಡಸರಲ್ಲಿ ಹೇರ್​ ಲಾಸ್​ ವಂಶಪಾರಂಪರ್ಯವಾಗಿ ಕಾಣಿಸಿಕೊಂಡ್ರೆ ಇತ್ತೀಚಿಗೆ ಪೌಷ್ಠಿಕಾಂಶದ ಕೊರತೆ ಹಾಗೂ ಕೆಲವು ಮೇಜರ್​ ಡಿಸೀಸಸ್​ನಿಂದಾಗಿಯೂ ಹೇರ್​ ಲಾಸ್​ ಆಗುವ ಸಾಧ್ಯತೆಗಳಿವೆ. ಅವುಗಳೆಂದರೆ.
1. ಮಧುಮೇಹ
ಮಧುಮೇಹ ನಿಮ್ಮ ಆರೋಗ್ಯದ ಮೇಲೆ ಹಲವು ಹಾನಿಕಾರಕ ಪರಿಣಾಮ ಬೀರುತ್ತೆ. ಇದು ರಕ್ತಪರಿಚಲನಾ ವ್ಯವಸ್ಥೆಗೆ ಅಡ್ಡಿ ಪಡಿಸುತ್ತೆ. ಜೊತೆಗೆ ನೆತ್ತಿಗೆ ರಕ್ತದ ಪೂರೈಕೆ ಸೀಮಿತಗೊಳಿಸುತ್ತೆ. ಇದರಿಂದಾಗಿ ಕೂದಲಿನ ಕಿರು ಚೀಲಗಳು ಒಣಗಿ ಕುದಲು ಉದುರಲು ಕಾರಣವಾಗುತ್ತದೆ. ಜೊತೆಗೆ ಕೂದಲಿನ ಬೆಳವಣಿಗೆ ಕುಂಠಿತವಾಗುತ್ತದೆ. ಡಯಾಬಿಟಿಸ್​ ಔಷಧಿಗಳು ಕೂಡ ಕೂದಲಿನ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ.
2. ರಕ್ತಹೀನತೆ
ದೇಹದಲ್ಲಿ ಕಬ್ಬಿಣದ ಅಂಶದ ಕೊರತೆ ಹೆಚ್ಚಾದಾಗ ರಕ್ತಹೀನತೆ ಉಂಟಾಗುತ್ತದೆ. ಇದರಿಂದಾಗಿ ಕೂದಲು ಉದುರುತ್ತೆ. ಪುರುಷರಿಗಿಂತ ಮಹಿಳೆಯರಲ್ಲಿ ಇದು ಹೆಚ್ಚಾಗಿ ಕಾಣಿಸಿಕೊಳ್ಳುತ್ತೆ. 20 ವರ್ಷಕ್ಕಿಂತ ಮೇಲ್ಪಟ್ಟ 20ರಷ್ಟು ಮಹಿಳೆಯರಲ್ಲಿ ರಕ್ತಹೀನತೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತೆ ಎಂದು ಅಧ್ಯಯನದಿಂದ ದೃಢಪಟ್ಟಿದೆ. ಬ್ಲಡ್​ ಟೆಸ್ಟ್​ ಮಾಡಿಸುವುದರಿಂದ ಈ ಸಮಸ್ಯೆಯಿಂದ ಬಳಲುತ್ತಿದ್ದೀರಾ ಎಂದು ತಿಳಿದುಕೊಳ್ಳಬಹುದು. ಈ ಸಮಸ್ಯೆ ಮಧುಮೇಹಕಿಂತ ಭಿನ್ನವಾಗಿದೆ. ಕಬ್ಬಿಣಾಂಶ ಭರಿತ ಆಹಾರ ಅಥವಾ ಕಬ್ಬಿಣಾಂಶವುಳ್ಳ ಗುಳಿಗೆಗಳನ್ನು ಸೇವಿಸುವುದರಿಂದ ಈ ಸಮಸ್ಯೆ ಸರಿಪಡಿಸಬಹುದು.
3. ಲೂಪಸ್​
ಲೂಪಸ್​ ಕೂದಲು​ ಉದುರುವಿಕೆಗೆ ಕಾರಣವಾಗುವ ಮತ್ತೊಂದು ಕಾಯಿಲೆ. ಈ ರೋಗದ ಲಕ್ಷಣಗಳು ಅನೇಕ ಪರಿಸ್ಥಿಗಳಲ್ಲಿ ಕಾಣಿಸಿಕೊಳ್ಳುತ್ತದೆ. ಆದರಿಂದ ಜನರು ಸಾಮಾನ್ಯವಾಗಿ ಗೊಂದಲಕ್ಕೊಳಗಾಗುವ ಸಾಧ್ಯತೆಗಳಿವೆ. ಚರ್ಮ, ಕೀಲುಗಳು, ಶ್ವಾಸಕೋಶಗಳು, ಮೂತ್ರಪಿಂಡಗಳು ಮತ್ತು ಕೂದಲಿನ ಮೇಲೆ ಇದು ಪರಿಣಾಮ ಬೀರುತ್ತದೆ. ಸಾಮಾನ್ಯವಾಗಿ ಬ್ರೋಕನ್ ಲೂಪಸ್ ಕೂದಲು, ನಿಮ್ಮ ಹಣೆಯ ಮೇಲೆ ಕಾಣಿಸಬಹುದು. ಲೂಪಸ್​ನಿಂದ ಉಂಟಾಗುವ ಹೇರ್​ ಲಾಸ್​ ಶಾಶ್ವತವಲ್ಲ.
4. ಥೈರಾಯ್ಡ್ ರೋಗಗಳು
ಹೈಪರ್ ಥೈರಾಯ್ಡಿಸಮ್ ಮತ್ತು ಹೈಪೋಥೈರಾಯ್ಡಿಸಮ್ ಎರಡು ಕೂಡ ಕೂದಲು ಉದುರುವಿಕೆಗೆ ಕಾರಣವಾಗುತ್ತದೆ. ಈ ಗ್ರಂಥಿಯು ನಿಮ್ಮ ಶಕ್ತಿಯ ಮಟ್ಟವನ್ನು ಹೆಚ್ಚಿಸುತ್ತೆ ಜೊತೆಗೆ ಹೊಸ ಕೋಶಗಳನ್ನು ಉತ್ಪಾದಿಸುತ್ತೆ. ನಿಮ್ಮ ದೇಹದ ಪ್ರತಿಯೊಂದು ಭಾಗಕ್ಕೂ ಮತ್ತು ಕೂದಲಿನ ಕಿರು ಚೀಲಗಳು ಕಾರ್ಯ ನಿರ್ವಹಿಸಲು ಈ ಗ್ರಂಥಿಯ ಅವಶ್ಯಕತೆಯಿದೆ. ನಿಷ್ಕ್ರಿಯ ಅಥವಾ ಅತಿಯಾಗಿ ಸಕ್ರಿಯ ಥೈರಾಯ್ಡ್ ಗ್ರಂಥಿ ನಿಧಾನವಾಗಿ ಕೂದಲು ಉದುರಲು ಕಾರಣವಾಗುತ್ತೆ.
5. ಕ್ಯಾನ್ಸರ್
ಕಿಮೊಥೆರಪಿ ಮತ್ತು ವಿಕಿರಣ ಚಿಕಿತ್ಸೆ ಕ್ಯಾನ್ಸರ್ ರೋಗಕ್ಕೆ ಇರುವ ಎರಡು ರೀತಿಯ ಚಿಕಿತ್ಸೆಗಳು. ಈ ಎರಡು ರೀತಿಯ ಚಿಕಿತ್ಸೆಗಳಿಂದ ಕೂದಲು ನಷ್ಟವಾಗುತ್ತೆ. ಕೀಮೋಥೆರಪಿಯಿಂದಾಗಿ ಸಂಪೂರ್ಣವಾಗಿ ಕೂದಲು ನಷ್ಟವಾಗುತ್ತೆ. ಈ ಚಿಕಿತ್ಸೆಯಿಂದಾಗಿ ಕೆಲವೇ ವಾರಗಳಲ್ಲಿ ರೋಗಿ ಭಾಗಶಃ ಅಥವಾ ಸಂಪೂರ್ಣವಾಗಿ ಕೂದಲನ್ನ ಕಳೆದುಕೊಳ್ಳುತ್ತಾನೆ. ಕೂದಲು ಉದುರುವ ಮಟ್ಟ ಚಿಕಿತ್ಸೆಯ ಅವಧಿ ಮತ್ತು ಚಿಕಿತ್ಸೆಗಾಗಿ ಬಳಸುವ ಔಷಧಿ ಮೇಲೆ ಅವಲಂಭಿಸಿರುತ್ತೆ. ವಿಕಿರಣ ಚಿಕಿತ್ಸೆ ಶಾಶ್ವತ ಕೂದಲಿನ ನಷ್ಟವನ್ನು ಉಂಟುಮಾಡುತ್ತೆ.
6. ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್ (ಪಿಸಿಒಡಿ)
ಪಿಸಿಒಡಿ ಸಾಮಾನ್ಯವಾಗಿ ಹೆಂಗಸರ ದೇಹದಲ್ಲಿನ ಅಂಡಾಶಯಗಳು ಮತ್ತು ಪುರುಷ ಹಾರ್ಮೋನುಗಳ ಮಟ್ಟದಲ್ಲಿ ಹೆಚ್ಚುತ್ತಿರುವ ಪಿತ್ತಜನಕಾಂಗಗಳ ಬೆಳವಣಿಗೆಯಿಂದ ಉಂಟಾಗುತ್ತೆ. ಇದರಿಂದಾಗಿ ಮೊಡವೆ, ಮುಖದ ಮೇಲೆ ಕೂದಲು ಬೆಳವಣಿಗೆ, ನೆತ್ತಿಯ ಮೇಲೆ ಕೂದಲಿನ ನಷ್ಟ ಮತ್ತು ದೇಹದ ಇತರ ಭಾಗಗಳಲ್ಲಿ ಮಿತಿಮೀರಿದ ಕೂದಲು ಬೆಳವಣಿಗೆಯಾಗಲು ಕಾರಣವಾಗಬಹುದು. ಕೆಲವು ಸಂದರ್ಭಗಳಲ್ಲಿ, ಪಿಸಿಒಡಿ ಬಂಜೆತನಕ್ಕೆ ಕಾರಣವಾಗುತ್ತದೆ.

 

ವಿಶೇಷ ಬರಹ: ಶ್ವೇತಾ ಪೂಜಾರಿ

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಕ್ಕಾಗಿ ಸಂಪರ್ಕಿಸಿ: contact@firstnews.tv