ನಾನು ಪಕ್ಷೇತರ ಅಭ್ಯರ್ಥಿಯಾಗಿ ನಿಲ್ಲುವುದು ಅಸಾಧ್ಯವೇನಲ್ಲ: ವಿನಯ್ ಕುಲಕರ್ಣಿ

ಹುಬ್ಬಳ್ಳಿ: ನಾನು ಧಾರವಾಡ ಲೋಕಸಭಾ ಕ್ಷೇತ್ರದ ಪ್ರಬಲ ಟಿಕೆಟ್ ಆಕಾಂಕ್ಷಿ. ಸಿದ್ದರಾಮಯ್ಯ ನವರ ಜೊತೆ ನಮ್ಮ ಮುಖಂಡರು ಮಾತನಾಡಿದ್ದಾರೆ. ನಾನು ಪಕ್ಷೇತರರಾಗಿ ನಿಲ್ಲುವುದು ಅಸಾಧ್ಯವೇನಲ್ಲ. ಈ ಹಿಂದೆ ನಾನು ಪಕ್ಷೇತರನಾಗಿ ಗೆದ್ದು ಬಂದಿದ್ದೇನೆ ಎಂದು ಕೈ ನಾಯಕರ ವಿರುದ್ಧ ಮಾಜಿ ಸಚಿವ ವಿನಯ್ ಕುಲಕರ್ಣಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ವಿನಯ್ ಕುಲಕರ್ಣಿ, ಚುನಾವಣೆ ನಾಮಪತ್ರ ಸಲ್ಲಿಕೆಗೆ ನಾನು ಸಿದ್ಧತೆ ಮಾಡಿಕೊಂಡಿದ್ದೇನೆ‌. ಟಿಕೆಟ್ ವಿಳಂಬವಾಗುತ್ತಿರುವುದು ಕಾರ್ಯಕರ್ತರಿಗೆ ತೀವ್ರ ಬೇಸರ ಉಂಟು ಮಾಡಿದೆ. ಯಾಕೆ ವಿಳಂಬ ಮಾಡುತ್ತಿದ್ದಾರೆ ಅನ್ನೋದು ನನಗೆ ಗೊತ್ತಿಲ್ಲ. ಇಷ್ಟೊಂದು ವಿಳಂಬ ಮಾಡಿ ಟಿಕೆಟ್ ನೀಡೋದು ಸರಿಯಲ್ಲ.
ಕಾರ್ಯಕರ್ತರು ಮಾನಸಿಕವಾಗಿ ಸಾಕಷ್ಟು ನೊಂದಿದ್ದಾರೆ. ಟಿಕೆಟ್ ವಿಳಂಬದಿಂದ ನನ್ನ ಮನಸಿಗೆ ದೊಡ್ಡ ಹಿಂಸೆಯಾಗುತ್ತಿದೆ. ಸಂಸದ ಪ್ರಹ್ಲಾದ್ ಜೋಶಿ ಅವರಿಗೆ ಸೋಲಿನ‌ ಭೀತಿ ಕಾಡುತ್ತಿದ್ದೆ. ಅದಕ್ಕೆ ಕ್ಷೇತ್ರದಲ್ಲಿ ಸುತ್ತುತ್ತಿದ್ದಾರೆ. ಜೋಶಿ‌ ಬೆಳೆದಿದ್ದು ಅನಂತ್ ಕುಮಾರ್ ಅವರಿಂದ. ಈಗ ಅನಂತ್ ಕುಮಾರ್ ಪತ್ನಿಗೆ ಟಿಕೆಟ್ ಕೈ ತಪ್ಪಿದೆ. ಆದ್ರೆ ಈ ಬಗ್ಗೆ ಜೋಶಿ ತುಟಿ ಬಿಚ್ಚುತ್ತಿಲ್ಲ  ಎಂದು ಕುಟುಕಿದರು.


Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv