ಇಂದು RCBಗೆ ಅದೃಷ್ಟ ತಂದುಕೊಡ್ತಾರೆ ವೇಗಿ ಡೇಲ್ ಸ್ಟೇನ್..?

ಟೂರ್ನಿಯಲ್ಲಿ ಸತತ ಸೋಲುಗಳಿಂದ ಕಂಗೆಟ್ಟಿರುವ ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡ, ಇಂದು ಈಡನ್ ಗಾರ್ಡನ್ಸ್​ನಲ್ಲಿ ಕೊಲ್ಕತ್ತಾ ನೈಟ್​ರೈಡರ್ಸ್​ ತಂಡವನ್ನ ಎದುರಿಸಲಿದೆ. 8 ಪಂದ್ಯಗಳನ್ನ ಆಡಿ ಕೇವಲ ಒಂದೇ ಒಂದು ಪಂದ್ಯವನ್ನ ಗೆದ್ದಿರುವ ಆರ್​ಸಿಬಿ, ಪಾಯಿಂಟ್ ಟೇಬಲ್​ನಲ್ಲಿ ಕೊನೆಯ ಸ್ಥಾನದಲ್ಲಿದೆ. 8ನೇ ಸ್ಥಾನದಲ್ಲಿದ್ರೂ ಪ್ಲೇ ಆಫ್ ಕನಸು ಕೈಬಿಡದ ವಿರಾಟ್ ಕೊಹ್ಲಿ ಬಾಯ್ಸ್, ಇನ್ನು ಉಳಿದ ಪಂದ್ಯಗಳಲ್ಲಿ ಮಿರಾಕಲ್ ಮಾಡಿ ಗೆಲ್ಲಲ್ಲು ಹೊರಟಿದ್ದಾರೆ. ದಕ್ಷಿಣ ಆಫ್ರಿಕಾದ ಸ್ಪೀಡ್​ಸ್ಟಾರ್ ಡೇಲ್ ಸ್ಟೇನ್ ಆರ್​ಸಿಬಿಗೆ ಎಂಟ್ರಿ ಕೊಟ್ಟಿರೋದು, ತಂಡದ ಗೆಲುವಿನ ವಿಶ್ವಾಸ ಹೆಚ್ಚಿಸಿದೆ. ಮತ್ತೊಂದೆಡೆ ಟೂರ್ನಿಯ ಆರಂಭದಿಂದಲೂ ಬೆಸ್ಟ್ ಪ್ಲೇಯಿಂಗ್ ಇಲೆವೆನ್ ಹುಡುಕಾಟ ನಡೆಸುತ್ತಿರುವ ಕ್ಯಾಪ್ಟನ್ ಕೊಹ್ಲಿ, ಉಳಿದ ಪಂದ್ಯಗಳಲ್ಲಾದ್ರೂ ಉತ್ತಮ ತಂಡವನ್ನ ಕಣಕ್ಕಿಳಿಸಬೇಕಿದೆ. ಇನ್ನು ಕೊಲ್ಕತ್ತಾ ನೈಟ್​ರೈಡರ್ಸ್​ ತಂಡದ ನಾಯಕನಿಗೆ, ಆಂಡ್ರೆ ರಸೆಲ್ ಇಂಜುರಿ ಸಮಸ್ಯೆ ತಲೆ ನೋವಾಗಿ ಪರಿಣಮಿಸಿದೆ. ಒಂದು ವೇಳೆ ರಸೆಲ್ ಇಂದಿನ ಪಂದ್ಯಕ್ಕೆ ಫಿಟ್ ಆಗದೇ ಇದ್ರೆ, ವೆಸ್ಟ್ ಇಂಡೀಸ್​ನ ಮತ್ತೋರ್ವ ಆಲ್​ರೌಂಡರ್ ಕಾರ್ಲೋಸ್ ಬ್ರಾಥ್ವೇಟ್, ಕೆಕೆಆರ್​ ಪ್ಲೇಯಿಂಗ್ ಇಲೆವೆನ್​ನಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಿದೆ. ಒಟ್ನಲ್ಲಿ, ಇಂದು ಕ್ರಿಕೆಟ್ ಕಾಶಿ ಈಡನ್ ಗಾರ್ಡನ್ಸ್​ನಲ್ಲಿ, ಎರಡು ಬಲಿಷ್ಠ ತಂಡಗಳ ಬಿಗ್ ಫೈಟ್​ಗೆ, ವೇದಿಕೆ ಸಜ್ಜಾಗಿದೆ.


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv