‘ಜನಸೇವೆ ಮಾಡಲು ಸಣ್ಣ ಖಾತೆಗಿಂತಲೂ ಬೇರೊಂದು ಖಾತೆ ಬೇಕಾ..?’

ಮಂಡ್ಯ: ಸಣ್ಣ ನೀರಾವರಿ ಖಾತೆಗೆ ಸಚಿವ ಸಿ.ಎಸ್.ಪುಟ್ಟರಾಜು ಅಸಮಾಧಾನ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ, ಜನಸೇವೆ ಮಾಡಲು ಸಣ್ಣ ಖಾತೆಗಿಂತಲೂ, ಬೇರೊಂದು ಖಾತೆ ಬೇಕಾ..? ಅಂತಾ ಪುಟ್ಟರಾಜುಗೆ ಶಾಸಕ ರವೀಂದ್ರ ಶ್ರೀಕಂಠಯ್ಯ ಟಾಂಗ್ ಕೊಟ್ಟಿದ್ದಾರೆ.

ಶ್ರೀರಂಗಪಟ್ಟಣದಲ್ಲಿ ಈ ಕುರಿತು ಮಾತನಾಡಿದ ಅವರು ಪುಟ್ಟರಾಜುಗೆ ಸಣ್ಣ ನೀರಾವರಿ ಖಾತೆ ನೀಡಿರೋದು ಸಂತೋಷದ ಸಂಗತಿ. ಮಂಡ್ಯ ಜಿಲ್ಲೆಗೆ ಅತ್ಯವಶ್ಯಕವಾದ ಖಾತೆ. ಇದು ಮಂಡ್ಯ ಜಿಲ್ಲೆಗೆ ವರದಾನವಾಗಿದೆ. ಜಿಲ್ಲೆಯ ಕೆರೆ ಕಟ್ಟೆಗಳ ಅಭಿವೃದ್ಧಿಗೆ ಸಹಕಾರಿಯಾಗಲಿದೆ. ಜಿಲ್ಲೆಗೆ ಸಣ್ಣ ನೀರಾವರಿ, ಸಾರಿಗೆ ಖಾತೆ ನೀಡಿದ್ದಕ್ಕೆ ಸಿಎಂಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಅವರು ಹೇಳಿದ್ರು.
ಜಿಲ್ಲಾ ಉಸ್ತುವಾರಿಗೆ ಪೈಪೋಟಿ ನೀಡುತ್ತಿರುವುದಕ್ಕೆ ಪ್ರತಿಕ್ರಿಯಿಸಿದ ಅವರು ಆಡಳಿತ ದೃಷ್ಟಿಯಿಂದ ಸಿಎಂ ಯಾರಿಗೇ ಕೊಟ್ಟರೂ ಸ್ವಾಗತ. ನಾನು ಯಾವುದೇ ಸ್ಥಾನ ಕೇಳಿಲ್ಲ. ಪಕ್ಷದ ಹಿತದೃಷ್ಟಿಯಿಂದ ವರಿಷ್ಠರು ತೆಗೆದುಕೊಳ್ಳುವ ತೀರ್ಮಾನಕ್ಕೆ ಬದ್ಧ ಎಂದು ರವೀಂದ್ರ ಶ್ರೀಕಂಠಯ್ಯ ಹೇಳಿದ್ರು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗಾಗಿ ಸಂಪರ್ಕಿಸಿ: contact@firstnews.tv