ರಾಕಿಂಗ್ ಸ್ಟಾರ್ ಮನೆಗೆ ಕನಸುಗಾರ ಹೋಗಿದ್ಯಾಕೆ ಗೊತ್ತಾ?!

ಕರ್ನಾಟಕದ ಶೋ ಮ್ಯಾನ್ ನಟ, ನಿರ್ದೇಶಕ, ಸಂಗೀತ ನಿರ್ದೇಶಕ, ನಿರ್ಮಾಪಕ ವಿ.ರವಿಚಂದ್ರನ್ ಈಗ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ಇದೇನಪ್ಪ ಇದು ಬ್ಯಾಕ್​ ಟು ಬ್ಯಾಕ್ ಚಿತ್ರ ಮಾಡ್ತಾ ಇದ್ದಾರಾ? ಅಂತಾ ಕನ್ಫ್ಯೂಸ್ ಆಗಬೇಡಿ. ಏಕಂದ್ರೆ, ವಿ.ರವಿಚಂದ್ರನ್ ಬ್ಯುಸಿ ಆಗಿರೋದು ತಮ್ಮ ಮುದ್ದಿನ ಮಗಳ ಮದುವೆ ಸಂಭ್ರಮದಲ್ಲಿ. ಹೌದು, ಇದೇ ತಿಂಗಳು 29ನೇ ತಾರೀಖಿನಂದು ವಿ.ರವಿಚಂದ್ರನ್ ಅವರ ಮಗಳ ಮದುವೆ ಇದೆ. ಈ ಹಿನ್ನೆಲೆಯಲ್ಲಿ ರವಿಚಂದ್ರನ್ ಅವರು ತಮ್ಮ ಪತ್ನಿ ಸುಮತಿಯವರೊಂದಿಗೆ ಸೇರಿ, ತಾವೇ ಸ್ವತಃ ತಮ್ಮ ನೆಂಟರಿಷ್ಟರ, ಸ್ನೇಹಿತರ ಮನೆಗೆ ತೆರಳಿ ಇನ್ವೈಟ್ ಮಾಡ್ತಾ ಇದ್ದಾರೆ. ಅದರಂತೆ ಇತ್ತೀಚೆಗಷ್ಟೇ ರಾಕಿಂಗ್ ಸ್ಟಾರ್ ಯಶ್ ಮನೆಗೆ ತೆರಳಿದ್ದ ರವಿಚಂದ್ರನ್ ಮತ್ತು ಅವರ ಪತ್ನಿ, ಯಶ್​​ ಕುಟುಂಬಕ್ಕೆ ಪ್ರೀತಿಯ ಆಹ್ವಾನ ನೀಡಿದ್ದಾರೆ. ಒಟ್ಟಿನಲ್ಲಿ ಅದ್ಧೂರಿ ಮದುವೆ ಪ್ಲಾನ್ ಮಾಡಿರೋ ರವಿಚಂದ್ರನ್, ಅಷ್ಟೇ ಅದ್ದೂರಿಯಾದ ಇನ್ವಿಟೇಷನ್ ಕಾರ್ಡ್ ಕೂಡ ಮಾಡಿಸಿದ್ದಾರೆ.

 


Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv