ಗೃಹಸ್ಥಾಶ್ರಮಕ್ಕೆ ಕಾಲಿಟ್ಟ ರವಿಚಂದ್ರನ್ ಪುತ್ರಿ!

ಇವತ್ತು ಕ್ರೇಜಿಸ್ಟಾರ್ ರವಿಚಂದ್ರನ್​ ಮಗಳು ಗೀತಾಂಜಲಿ, ಉದ್ಯಮಿ ಅಜಯ್ ಜೊತೆ ಸಪ್ತಪದಿ ತುಳಿದಿದ್ದಾರೆ. ನಗರದ ಅರಮನೆ ಮೈದಾನದ ತ್ರಿಪುರ ವಾಸಿನಿಯಲ್ಲಿ ಮುಹೂರ್ತ ಸಮಾರಂಭ ಅದ್ದೂರಿಯಾಗಿ ನಡೆಯಿತು. ಗೃಹಸ್ಥಾಶ್ರಮಕ್ಕೆ ಕಾಲಿಟ್ಟ ಜೋಡಿಗೆ ಭಾರತೀಯ ಸಿನಿರಂಗದ ಖ್ಯಾತ ತಾರೆಯರು, ಗಣ್ಯರು, ಕಲಾವಿದರು ಶುಭ ಹಾರೈಸಿದ್ದಾರೆ. ಇನ್ನು, ಕ್ರೇಜಿಸ್ಟಾರ್ ರವಿಚಂದ್ರನ್‌ ಗೋಲ್ಡನ್ ಕಲರ್‌ ಡ್ರೆಸ್‌ನಲ್ಲಿ ಮಿಂಚಿದ್ದಾರೆ.