ಅಧಿಕಾರದಲ್ಲಿದ್ದಾಗ ನಾನು ತಪ್ಪು ಮಾಡಿದ್ರೆ, ಪ್ರಿಯಾಂಕ್ ಖರ್ಗೆ ಆಗ ಏನು ನಿದ್ದೆ ಮಾಡ್ತಿದ್ರಾ?: ರತ್ನಪ್ರಭಾ

ರಾಯಚೂರು: ಅಧಿಕಾರದಲ್ಲಿದ್ದಾಗ ನಾನು ತಪ್ಪು ಮಾಡಿದ್ರೆ ಆಗ ಪ್ರಿಯಾಂಕ್ ಖರ್ಗೆ ಏನು ನಿದ್ದೆ ಮಾಡುತ್ತಿದ್ರಾ? ನಾನು ತಪ್ಪು ಮಾಡಿದ್ರೆ ಅದನ್ನ‌ ಬಯಲು ಮಾಡಲಿ ಅಂತಾ ನಿವೃತ್ತ ಐಎಎಸ್ ಅಧಿಕಾರಿ, ಬಿಜೆಪಿ ನಾಯಕಿ ಕೆ.ರತ್ನಪ್ರಭಾ ಹೇಳಿದ್ದಾರೆ. ರಾಯಚೂರಿನಲ್ಲಿ ಮಾತನಾಡಿದ ರತ್ನಪ್ರಭಾ, ಬಿಜೆಪಿಯವರು ಹೇಳಿಕೊಟ್ಟ ಹಾಗೇ ಹೇಳಿಕೆ ನೀಡಿದ್ರೆ ಅಧಿಕಾರದಲ್ಲಿದ್ದಾಗ ಮಾಡಿದ್ದ ತಪ್ಪುಗಳನ್ನ ಹೊರ ಹಾಕುತ್ತೇವೆ ಎಂದು ಪ್ರಿಯಾಂಕ್‌ ಖರ್ಗೆ ನೀಡಿದ್ದ ಹೇಳಿಕೆಗೆ  ತಿರುಗೇಟು ನೀಡಿದರು.

ಅಭಿವೃದ್ಧಿಗಾಗಿ ಚುನಾವಣೆಯಲ್ಲಿ ವೋಟ್ ಮಾಡಿ ಅಂತ ಜನರಲ್ಲಿ ಬೇಡಿಕೊಳ್ಳುತ್ತಿದ್ದೇವೆ. ವೇಗವಾಗಿ ಅಭಿವೃದ್ಧಿ ಆಗಬೇಕು ಅಂತಾ ಬಿಜೆಪಿಗೆ ಸೇರಿದ್ದೇನೆ. ಹೈದ್ರಾಬಾದ್ ಕರ್ನಾಟಕ ಭಾಗದಲ್ಲಿ ವೇಗವಾಗಿ ಅಭಿವೃದ್ಧಿ ಆಗುತ್ತಿಲ್ಲ. ನಾನು ಅಧಿಕಾರದಲ್ಲಿದ್ದಾಗ ಸಾಕಷ್ಟು ಕೆಲಸಗಳನ್ನ ಮಾಡಲು ಆಗಿಲ್ಲ. ಈಗ ಸಮಸ್ಯೆಗಳ ಪರಿಹಾರಕ್ಕಾಗಿ ರಾಜ್ಯಾದ್ಯಂತ ಓಡಾಡುತ್ತೇನೆ ಎಂದರು. ಸದಾಶಿವ ಆಯೋಗ ವರದಿ ವಿಚಾರದಲ್ಲಿ ರಾಜಕೀಯ ನಿರ್ಣಯ ತೆಗೆದುಕೊಳ್ಳಬೇಕು. ಸದಾಶಿವ ಆಯೋಗ ವರದಿ ಜಾರಿ ಆಗಲೇಬೇಕು ಅಂತಾ ರತ್ನಪ್ರಭಾ ಇದೇ ವೇಳೆ ಹೇಳಿದರು.

Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv