ಹಾವನ್ನು, ಇಲಿಯೇ ಹಿಡಿಯಿತು..!

ಬೀಜಿಂಗ್: ಇಲಿ ಹಾಗೂ ಕಪ್ಪೆಯಂತಹ ಪ್ರಾಣಿಗಳನ್ನ ಹಾವು ತಿನ್ನೋದು, ಹಾವನ್ನ ಹದ್ದು ಕುಕ್ಕುವುದು ಸಹಜ. ಅದು ಪ್ರಕೃತಿಯಲ್ಲಿ ನಡೆದುಕೊಂಡು ಬಂದಿರುವ ರೀತಿ ಕೂಡಾ ಹೌದು.. ಆದರೆ ಇದಕ್ಕೆ ವಿರುದ್ಧ ಎಂಬಂತೆ ಹಾವನ್ನೇ, ಇಲಿ ಎಳೆದುಕೊಂಡು ಹೋಗುವ ವಿಡಿಯೋ ಇದೀಗ ಫುಲ್​ ವೈರಲ್​ ಆಗಿದೆ. ಅರೇ, ಇದೇನು ಹೇಳ್ತಿದೀರಾ? ಹಾವು ತುಂಬಾ ಡೇಂಜರ್​​.. ಅದನ್ನೇನಾದ್ರು ಇಲಿ ಟಚ್​​ ಮಾಡೋಕೆ ಆಗುತ್ತಾ? ಹಾವನ್ನ ಕಂಡ್ರೆ ಸಾಕು, ಇಲಿ ಅಲ್ಲಿಂದ ಸತ್ನೋಬಿದ್ನೋ ಅಂತ ಓಡಿ ಹೋಗಿ ಬಿಲ ಸೇರಿಕೊಳ್ಳುತ್ತೆ..!

ಅಂಥದ್ರಲ್ಲಿ ಇವರೇನಪ್ಪಾ ಹೀಗ್​ ಹೇಳ್ತಿದಾರೆ ಅಂತ ನೀವು ತಲೇಲಿ ಹುಳ ಬಿಟ್ಕೊಬೇಡಿ.. ಇಂಥದ್ದೊಂದು ಘಟನೆ ಚೀನಾದಲ್ಲಿ ನಡೆದಿದ್ದು, ಇಲಿಯೊಂದು ರಸ್ತೆಯಲ್ಲಿ ಹಾವಿನೊಂದಿಗೆ ಫೈಟ್​​ ಮಾಡಿದೆ. ಅಲ್ಲದೇ ಹಾವಿಗೆ ಬಹಳಷ್ಟು ಕಾಟ ನೀಡಿ ಅದನ್ನ ಕಚ್ಚಿ ಗಾಯಗೊಳಿಸಿದೆ. ಬಳಿಕ ರಸ್ತೆಯಿಂದ ಹಾವನ್ನ ಪೊದೆಯೊಳಗೆ ಏಳೆದುಕೊಂಡು ಹೋಗಿದೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firsnews.tv