ಕನ್ನಡದಲ್ಲೂ ಬರುತ್ತೆ ಕಾರ್ತಿ- ರಶ್ಮಿಕಾ ಸಿನಿಮಾ..!

‘ಸೌತ್ ಇಂಡಿಯಾ ಕ್ರಶ್​​’ ರಶ್ಮಿಕಾ ಮಂದಣ್ಣ ಸದ್ಯ ಟಾಲಿವುಡ್ ಸೇರಿದಂತೆ ಬಹುಭಾಷೆಗಳಲ್ಲಿ ಮಿಂಚುತ್ತಿರೋ ಚೆಂದುಳ್ಳಿ ಚೆಲುವೆ. ವಿಜಯ್ ದೇವರಕೊಂಡ ಜೊತೆ ಗೀತಾ ಗೋವಿಂದಂ ಚಿತ್ರದಲ್ಲಿ ಕಮಾಲ್ ಮಾಡಿದ್ದ ಈ ಬೆಡಗಿ, ಬಳಿಕ ಹಲವು ಸ್ಟಾರ್​​ಗಳ ಜೊತೆ ಸ್ಕ್ರೀನ್ ಶೇರ್ ಮಾಡಿ ಧಮಾಕ ಸೃಷ್ಟಿಸಿದ್ರು. ಇದೀಗ ತಮಿಳು ಸ್ಟಾರ್ ಕಾರ್ತಿ ಜೊತೆ ಕೆ. 19 ಅನ್ನೋ, ಇನ್ನೂ ಹೆಸರಿಡದ ಹೊಸ ಚಿತ್ರದಲ್ಲಿ ನಟಿಸೋಕೆ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಬಕ್ಕಿಯಾ​ ರಾಜ್​ ಕಣ್ಣನ್ ನಿರ್ದೇಶನದಲ್ಲಿ ಈ ಚಿತ್ರ ಮೂಡಿ ಬರ್ತಾಯಿದ್ದು, ಈಗಾಗಲೇ ಭಾರೀ ಕುತೂಹಲ ಮೂಡಿಸಿದೆ. ವಿಶೇಷ ಅಂದ್ರೆ ರಶ್ಮಿಕಾ ಹಾಗೂ ಕಾರ್ತಿಯ ಈ ಹೊಸ ಸಿನಿಮಾ ಕನ್ನಡದಲ್ಲೂ ಡಬ್​​ ಆಗಿ ಬರಲಿದೆ.

ತಮಿಳು ಚಿತ್ರದ ಜೊತೆಯಲ್ಲೇ ಏಕಕಾಲದಲ್ಲಿ ಈ ಚಿತ್ರ ಕನ್ನಡಲ್ಲಿ ತೆರೆಕಾಣಲಿದೆಯಂತೆ. ಈಗಾಗಲೇ ಚಿತ್ರದ ಕುರಿತು ಮಾತುಕತೆ ನಡೆದಿದ್ದು ಚಿತ್ರೀಕರಣ ಶುರುವಾಗಬೇಕಿದೆ. ಸದ್ಯ ರಶ್ಮಿಕಾ ನಟನೆಯ ಡಿಯರ್ ಕಾಮ್ರೆಡ್​ ಚಿತ್ರ ಕೂಡ ತೆರೆಗೆ ಬರಲು ಸಜ್ಜಾಗಿದ್ದು ಕಾರ್ತಿ ಜೊತೆಯಾಗಿಯೂ ಭರ್ಜರಿ ರೊಮ್ಯಾನ್ಸ್ ಮಾಡಲಿದ್ದಾರೆ. ಇನ್ನು ಕಾರ್ತಿ ನಟನೆಯ 19ನೇ ಸಿನಿಮಾ ಕೂಡ ಇದಾಗಿದ್ದು ಚಿತ್ರ ತುಂಬಾನೇ ನಿರೀಕ್ಷೆ ಮೂಡಿಸಿದೆ.


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv