ಒಂದು ಸಣ್ಣ ತಪ್ಪಿಗೆ ರಶೀದ್ ಖಾನ್​​ಗೆ ದೊಡ್ಡ ಶಿಕ್ಷೆ..!

ಸ್ಪಿನ್​ ಸೆನ್ಸೇಶನ್​ ಆಗಿರೋ ಅಫ್ಘಾನಿಸ್ತಾನ್​​ನ ರಶೀದ್ ಖಾನ್​ ಐಪಿಎಲ್​ ನಂತರವೂ ಸುದ್ದಿಯಲ್ಲಿದ್ದಾರೆ. ಅದಕ್ಕೆ ಕಾರಣ, ಡೆಹ್ರಾಡೂನ್​​ನಲ್ಲಿ ನಡೆದ ಬಾಂಗ್ಲಾ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಅವರ ಅಮೋಘ ಪ್ರದರ್ಶನ.

ಸರಣಿಯುದ್ದಕ್ಕೂ ಬಾಂಗ್ಲಾ ಬ್ಯಾಟ್ಸ್​​ಮನ್​​ಗಳನ್ನ ಕಟ್ಟಿಹಾಕಿದ ರಶೀದ್ 8 ವಿಕೆಟ್​ಗಳನ್ನ ಪಡೆದ್ರು. ಅಷ್ಟೇ ಅಲ್ಲದೆ, ಫೈನಲ್​ ಪಂದ್ಯದ ಕೊನೆಯ ಓವರ್​​ನಲ್ಲಿ 9 ರನ್​ ಬೇಕಿದ್ದಾಗ ಡಿಫೆಂಡ್​ ಮಾಡಿಕೊಂಡ್ರು. ಈ ಮೂಲಕ ತಂಡ ಕ್ಲೀನ್​ ಸ್ವೀಪ್​ ಪಡೆಯಲು ನೆರವಾದ್ರು.

ರಶೀದ್​ ಪಿಚ್​​ನಲ್ಲೇನೋ ಬೆಸ್ಟ್​ ಪರ್ಫಾರ್ಮನ್ಸ್ ನೀಡಿದ್ರು. ಆದ್ರೆ, ಟ್ವಿಟರ್​​ನಲ್ಲಿ ಮಾತ್ರ ಯಡವಟ್ಟು ಮಾಡಿಕೊಂಡುಬಿಟ್ಟಿದ್ದಾರೆ. ಅದು ಹೇಗಪ್ಪಾ ಅಂದ್ರೆ, ರಶೀದ್ ಖಾನ್​ ಅವರ ಪರ್ಫಾರ್ಮನ್ಸ್​ ಕೊಂಡಾಡಿದ ಹೆಸರಾಂತ ಕಮೆಂಟೇಟರ್​ ಹರ್ಷಾ ಭೋಗ್ಲೆ, ‘ರಶೀದ್ ಅವರ ಅದ್ಭುತ ಬೌಲಿಂಗ್​​ ಇದು ಮತ್ತೊಂದು ಸಾಕ್ಷಿ’ ಅಂತ ಹೇಳಿದ್ದಾರೆ. ಹರ್ಷಾ ಅವರ ಈ ಕಮೆಂಟ್​​ಗೆ ಖುಶ್​ ಆದ ರಶೀದ್​ ರಿಪ್ಲೈ ಮಾಡುವಲ್ಲಿ ಎಡವಿಬಿಟ್ಟಿದ್ದಾರೆ. ತಮ್ಮ ತಂದೆಯ ವಯಸ್ಸಿನಲ್ಲಿರುವ ಹರ್ಷಾ ಭೋಗ್ಲೆ ಅವರಿಗೆ ‘ಥ್ಯಾಂಕ್​​ಯೂ ಬ್ರೋ..’ ಅಂತ ರಿಪ್ಲೈ ಮಾಡಿದ್ದಾರೆ. ಇದರಿಂದಾಗಿ, ಟ್ವಿಟರ್​ನಲ್ಲಿ ರಶೀದ್ ಸಿಕ್ಕಾಪಟ್ಟೆ ಟ್ರೋಲ್​​ಗೆ ಒಳಗಾಗಿದ್ದಾರೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv