ಕೊಡಗು ಸಂತ್ರಸ್ತರಿಗೆ ನೆರವು ನೀಡುವಂತೆ ಱಪರ್​ ಚಂದನ್​ ಶೆಟ್ಟಿ ಮನವಿ

ಬೆಂಗಳೂರು: ಪ್ರವಾಹದಿಂದ ತೊಂದರೆಗೀಡಾಡಿರುವ ಕೊಡಗು ಹಾಗೂ ಇನ್ನಿತರ ಜಿಲ್ಲೆಯ ಜನರ ನೆರವಿಗೆ ಧಾವಿಸುವಂತೆ ಖ್ಯಾತ ಱಪರ್ ಚಂದನ್ ಶೆಟ್ಟಿ  ಮನವಿ ಮಾಡಿದ್ದಾರೆ.
ನಗರದಲ್ಲಿಂದು ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕೊಡಗು ಹಾಗೂ ಇನ್ನಿತರ ಜಿಲ್ಲೆಗಳು ಎಂದೂ ಕಂಡರಿಯದ ಪ್ರವಾಹ ಪರಿಸ್ಥಿತಿಗೆ ತಲುಪಿದೆ. ಈ ಸಮಯದಲ್ಲಿ ಅವರ ನೆರವಿಗೆ ನಾವು ನಿಲ್ಲಬೇಕು. ನಿಮ್ಮ ಕೈಲಾದ ಸಹಾಯವನ್ನು ಜನರು ಮಾಡಬೇಕು ಎಂದು ಮನವಿ ಮಾಡಿದ್ದಾರೆ.ಇದೇ ವೇಳೆ ತಮ್ಮ ಕಡೆಯಿಂದ ಆಗುವ ಸಹಾಯವನ್ನು ಮಾಡುವುದಾಗಿ ತಿಳಿಸಿದ ಅವರು ನಾಳೆ ಸಂತ್ರಸ್ತರಿಗೆ ಸಾಮಗ್ರಿಗಳನ್ನು ತಲುಪಿಸುವ ವ್ಯವಸ್ಥೆ ಮಾಡುವುದಾಗಿ ತಿಳಿಸಿದರು.