ಮೆಜೆಸ್ಟಿಕ್‌ ನಿಲ್ದಾಣದಲ್ಲೇ ರೇಪ್​​ಗೆ ಯತ್ನ!

ಬೆಂಗಳೂರು: ಸಿಲಿಕಾನ್ ಸಿಟಿಯ ಹೃದಯಭಾಗ ಮೆಜೆಸ್ಟಿಕ್​​ನಲ್ಲಿ ಮಹಿಳೆ ಮೇಲೆ ಅತ್ಯಾಚಾರಕ್ಕೆ ಯತ್ನಿಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಈ ಸಂಬಂಧ ಅನ್ನಪೂರ್ಣೇಶ್ವರಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಸೆರೆಗೆ ಬಲೆ ಬೀಸಲಾಗಿದೆ.

ಸೋಮವಾರ ರಾತ್ರಿ ಮಂಗಳೂರಿನಿಂದ ಬೆಂಗಳೂರಿಗೆ ಮಹಿಳೆಯೊಬ್ಬರು ಬಂದಿದ್ದರು. ಸುಮಾರು 11 ಗಂಟೆ ಸುಮಾರಿಗೆ ಮೆಜೆಸ್ಟಿಕ್​​ಗೆ ಬಂದಿಳಿದಿದ್ದ ಆಕೆ ತಾನು ಹೋಗಬೇಕಿದ್ದ ಏರಿಯಾಗೆ ಹೋಗಲು ಬಸ್​ಗಾಗಿ ಕಾಯುತ್ತಿದ್ದರು. ಈ ವೇಳೆ ಬೈಕ್​ನಲ್ಲಿ ಬಂದ ಇಬ್ಬರು ಕಿರಾತಕರು ಮಹಿಳೆಯ ಹತ್ತಿರ ಬಂದು ಲೈಂಗಿಕ ದೌರ್ಜನ್ಯ ನಡೆಸಿದ್ದಾರಂತೆ. ಇದರಿಂದ ತಪ್ಪಿಸಿಕೊಳ್ಳಲು ಆಕೆ ರಸ್ತೆ ಕ್ರಾಸ್​ ಮಾಡಿ ರೈಲ್ವೇ ನಿಲ್ದಾಣದ ಕಡೆ ಹೊರಟಿದ್ದಾಳೆ. ಆಗ ಬೈಕ್​ ಏರಿ ಬಂದ ಕಿರಾತಕರು ಮಹಿಳೆಯನ್ನ ಬಿಗಿಯಾಗಿ ಹಿಡಿದುಕೊಂಡಿದ್ದಾರೆ. ಅದ್ರಲ್ಲಿ ಹಿಂಬದಿ ಕೂತಿದ್ದ ದುಷ್ಟ, ಆಕೆಯ ವೇಲ್ ಕಸಿದು ಆಕೆಯ ಬಾಯಿಗೆ ಬಿಗಿಯಾಗಿ ಕಟ್ಟಿದ್ದಾನೆ. ಬಳಿಕ ಆಕೆಯನ್ನ ಬೈಕ್​ ಮೇಲೆ ಕೂರಿಸಿಕೊಂಡು ಕಿಡ್ನ್ಯಾಪ್ ಮಾಡಿದ್ದಾರೆ. ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋದ ಪಾಪಿಗಳು ಆಕೆಯ ಅಂಗಾಂಗಳನ್ನ ಮುಟ್ಟಿ ಅತ್ಯಾಚಾರಕ್ಕೆ ಯತ್ನಿಸಿದ್ದಾರೆ. ಈ ವೇಳೆ ಮಹಿಳೆ ಸಹಾಯಕ್ಕಾಗಿ ಕೂಗಲು ಆರಂಭಿಸಿದಾಗ ಗಾಬರಿಗೊಂಡ ಆರೋಪಿಗಳು ಅಲ್ಲಿಂದ ಬೈಕ್​ ಏರಿ ಎಸ್ಕೇಪ್ ಆಗಿದ್ದಾರೆ. ಮೆಜೆಸ್ಟಿಕ್​​ನಲ್ಲೇ ಈ ಕೃತ್ಯ ನಡೆದಿರೋದು ಎಲ್ಲರನ್ನ ಬೆಚ್ಚಿ ಬೀಳಿಸುವಂತೆ ಮಾಡಿದೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗಾಗಿ ಸಂಪರ್ಕಿಸಿ: contact@firstnews.tv