ಅತ್ಯಾಚಾರಿಯಿಂದಾಗಿ ಊರನ್ನೇ ತೊರೆದರು..!

ಚಾಮರಾಜನಗರ: ಗುಂಡ್ಲುಪೇಟೆ ತಾಲೂಕಿನ ಬೇಗೂರು ಠಾಣಾ ವ್ಯಾಪ್ತಿಯಲ್ಲಿ ಅಪ್ರಾಪ್ತ ಬಾಲಕಿ ಮೇಲೆ ಕಿರಾತಕನೊಬ್ಬ ಅತ್ಯಾಚಾರವೆಸಗಿದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಬಾಲಕಿ ವಾಸವಿರುವ ಗ್ರಾಮದ್ದೇ ನಿವಾಸಿಯಾದ ಶಶಿ (26) ಫೆಬ್ರುವರಿ 22 ರಂದು ಬಾಲಕಿ ಮೇಲೆ ಆತ್ಯಾಚಾರ ಎಸಗಿದ್ದ ಎನ್ನಲಾಗ್ತಿದೆ. ಘಟನೆಯಿಂದ ಮನನೊಂದ ಕುಟುಂಬದವ್ರು ಊರನ್ನೇ ಬಿಟ್ಟುಹೋಗಿದ್ರು. ಇದೀಗ ಬೇಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿ ಶಶಿಯನ್ನು ಪೊಲೀಸರು ಬಂಧಿಸಿದ್ದಾರೆ.

Leave a Reply

Your email address will not be published. Required fields are marked *