ಪತ್ನಿ ದೀಪಿಕಾ ಪಾದರಕ್ಷೆ ಕೈಯಲ್ಲಿ ಹಿಡಿದಿದ್ಯಾಕೆ ರಣ್ವೀರ್​..! ಇದಕ್ಕೇನು ಅಂದ್ರು ಫ್ಯಾನ್ಸ್?

ಬಾಲಿವುಡ್​​ ಕ್ಯೂಟ್​ ಜೋಡಿ ದೀಪಿಕಾ ಪಡುಕೋಣೆ ಹಾಗೂ ರಣ್ವೀರ್​ ಸಿಂಗ್ ಅಭಿಮಾನಿಗಳಿಗೆ ಕಪಲ್ ಗೋಲ್ಸ್​​ ನೀಡ್ತಿದ್ದಾರೆ. ಪ್ರತಿ ಸಲ ಇವರಿಬ್ಬರ ಕೆಮಿಸ್ಟ್ರಿ ಜನರ ಮನಸೆಳೆಯುತ್ತೆ. ಇತ್ತೀಚೆಗೆ ಡಿಪ್ಪಿ ಹಾಗೂ ರಣ್ವೀರ್ ಮುಂಬೈನಲ್ಲಿ​ ಮದುವೆ ಸಮಾರಂಭವೊಂದಕ್ಕೆ ಹೋಗಿದ್ರು. ಈ ವೇಳೆ ರಣ್ವೀರ್​ಗೆ ಪತ್ನಿ ಮೇಲೆ ಎಷ್ಟು ಪ್ರೀತಿ ಇದೆ ಅನ್ನೋದು ಅವರ ಆ್ಯಕ್ಷನ್ಸ್​​ನಿಂದಲೇ ಗೊತ್ತಾಯ್ತು. ಜನಜಂಗುಳಿಯಿಂದ ದೀಪಿಕಾಳನ್ನ ರಕ್ಷಣೆ ಮಾಡೋದ್ರಿಂದ ಹಿಡಿದು ಆಕೆಯ ಪಾದರಕ್ಷೆಯನ್ನ ಕೈಯಲ್ಲಿ ಹಿಡಿದುಕೊಳ್ಳೊವರೆಗೆ ರಣ್ವೀರ್​​ ತಾವೊಬ್ಬ ಪ್ರೀತಿಯ ಪತಿ ಅನ್ನೋದನ್ನ ನಿರೂಪಿಸಿದ್ರು. ರಣ್ವೀರ್​ ಸಿಂಗ್, ದೀಪಿಕಾಳ ಪಾದರಕ್ಷೆಯನ್ನ ಕೈಯಲ್ಲಿ ಹಿಡಿದುಕೊಂಡಿರೋ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸದ್ಯ ವೈರಲ್ ಆಗಿವೆ. ರಣ್ವೀರ್​ ನಿಜಕ್ಕೂ ತುಂಬಾ ಒಳ್ಳೇ ಪತಿ. ಗಂಡ ಅಂದ್ರೆ ಹೀಗಿರಬೇಕು..ಅಂತೆಲ್ಲಾ ಜನರು ಕಮೆಂಟ್​ ಮಾಡಿದ್ದಾರೆ.

Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv