ಮತ್ತೆ ಕಾಂಟ್ರೋವರ್ಸಿ ಜೊತೆ ಬರ್ತಿದ್ದಾಳೆ ರಂಗನಾಯಕಿ..!

ಕನ್ನಡದಲ್ಲಿ ತುಂಬಾನೆ ಚರ್ಚೆಗೊಳಗಾದ ಸಿನಿಮಾಗಳಲ್ಲಿ ಅಂಬರೀಶ್ ಹಾಗೂ ಆರತಿ​ ಅಭಿನಯದ ‘ರಂಗನಾಯಕಿ’ ಸಿನಿಮಾ ಕೂಡ ಒಂದು. ಮಹಿಳಾ ಪ್ರಧಾನ ಚಿತ್ರದಲ್ಲಿ ಆರತಿ ಮನೋಜ್ಞವಾಗಿ ನಟಿಸಿ ಸೈ ಎನಿಸಿಕೊಂಡಿದ್ರು. ಇದೀಗ 38 ವರ್ಷಗಳ ನಂತ್ರ ಇದೇ ಟೈಟಲ್​ನಲ್ಲಿ ಮತ್ತೆ ಸಿನಿಮಾ ಬರ್ತಾ ಇದೆ. ಚಿತ್ರಕ್ಕೆ ದಯಾಳ್​ ಪದ್ಮನಾಭನ್ ನಿರ್ದೇಶನ ಮಾಡ್ತಾಯಿದ್ದು ಚಿತ್ರಕ್ಕೆ ಹೊಸ ಕಾಂಟ್ರೋವರ್ಸಿ ಸುತ್ತಿಕೊಂಡಿದೆ. ಹೌದು ಚಿತ್ರದ ಸಬ್​ ಟೈಟಲ್​ಗೆ ವಾಲ್ಯೂಮ್​ 1 : ವರ್ಜಿನಿಟಿ ಅಂತಾ ಕೊಟ್ಟಿರೋದು ಸದ್ಯ ಭಾರೀ ಚರ್ಚೆಗೆ ಒಳಗಾಗುವಂತೆ ಮಾಡಿದೆ. ಅಂದಿನ ಚಿತ್ರದಲ್ಲಿ ಅತ್ಯಾಚಾರಕ್ಕೆ ಒಳಗಾದ ಯುವತಿಯೊಬ್ಬಳು ಸಮಾಜವನ್ನು ಹೇಗೆ ಎದುರಿಸುತ್ತಾಳೆ ಎಂಬುದರ ಒಂದೆಳೆ ಸ್ಟೋರಿಯನ್ನು ಹೊಂದಿತ್ತು. ಇದೀಗ ಈ ಚಿತ್ರವೂ ಹೊಸತರದಲ್ಲಿ ವಿಭಿನ್ನ ಕಥೆಯೊಂದಿಗೆ ಬರ್ತಾಯಿದ್ದು. ಚಿತ್ರದ ಟ್ಯಾಗ್ ಲೈನ್ ಮತ್ತಷ್ಟು ಕುತೂಹಲ ಮೂಡಿಸಿದೆ. ಇನ್ನು ಚಿತ್ರದಲ್ಲಿ ಹೊಸ ರಂಗನಾಯಕಿಯ ಪಾತ್ರದಲ್ಲಿ ಅದಿತಿ ಪ್ರಭುದೇವ ಕಾಣಿಸಿಕೊಂಡಿದ್ದಾರೆ. ಕೆಲವೇ ದಿನಗಳಲ್ಲಿ ಶೂಟಿಂಗ್ ಶುರುವಾಗಲಿದೆ. ಪುಟ್ಟಣ್ಣ ಕಣಗಾಲ್ ನಿರ್ದೇಶನದಲ್ಲಿ ಹಿಟ್ ಸಿನಿಮಾವಾಗಿದ್ದ ಚಿತ್ರ ಹೊಸ ರೂಪದಲ್ಲಿ ಮತ್ತೆ ಮೋಡಿ ಮಾಡಲು ರೆಡಿಯಾಗ್ತಿದ್ದು. ಚಿತ್ರದಲ್ಲಿ ಯಾಱರು ಕಾಣಿಸಿಕೊಳ್ಳಲಿದ್ದಾರೆ ಅನ್ನೋದು ಗೊತ್ತಾಗಬೇಕಿದೆ.

Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv