ರಾಣೆಬೆನ್ನೂರು ಕೆಪಿಜೆಪಿ ಶಾಸಕ ಶಂಕರ್​ ಬೆಂಬಲ ಈಗ ಕಾಂಗ್ರೆಸ್​ಗೆ..!

ಬೆಂಗಳೂರು: ಬೆಳಗ್ಗೆಯಷ್ಟೇ ತಮ್ಮ ನಾಯಕ ಯಡಿಯೂರಪ್ಪ ಪಾಳಯದಲ್ಲಿ ಕಾಣಿಸಿಕೊಂಡು ನಾವು ನಿಮ್ಮ ಜತೆಗಿದ್ದೇವೆ. ಸರಕಾರ ರಚನೆಗೆ ಅರ್ಜಿ ಹಾಕಿಕೊಳ್ಳಿ ಎಂದು ಹೇಳಿದ್ದ ರಾಣೆಬೆನ್ನೂರಿನ ಕೆಪಿಜೆಪಿ ಶಾಸಕ ಇದೀಗ ಸಡನ್​ ಆಗಿ ಕಾಂಗ್ರೆಸ್​ ಅಂಗಳದಲ್ಲಿ ಕಾಣಿಸಿಕೊಂಡಿದ್ದಾರೆ.

ಸಂಜೆ ವೇಳೆಗೆ ಕೆಪಿಸಿಸಿಯಲ್ಲಿ ಪ್ರತ್ಯಕ್ಷವಾಗುವ ಮೂಲಕ ಶಂಕರ್​ ಅಚ್ಚರಿ ಮೂಡಿಸಿದ್ದಾರೆ. ಭೈರತಿ ಬಸವರಾಜ ಜೊತೆ ಕಾಂಗ್ರೆಸ್ ಕಚೇರಿಗೆ ಆಗಮಿಸಿದ ಶಂಕರ್, ಬಿಜೆಪಿಗೆ ಶಾಕ್ ನೀಡಿದ್ದಾರೆ. ಇದರಿಂದ ಸದ್ಯಕ್ಕೆ ಕಾಂಗ್ರೆಸ್​ ಬಲ ಇಬ್ಬರು ಪಕ್ಷೇತರ ಶಾಸಕರ ಸಹಾಯದಿಂದಾಗಿ 80 ಕ್ಕೆ ಏರಿದ್ದು, ಬಿಜೆಪಿ ಬಲ 104 ಕ್ಕೆ ಕುಸಿದಿದೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗಾಗಿ ಸಂಪರ್ಕಿಸಿ: contact@firstnews.tv